ಕರ್ನಾಟಕ

ಕರ್ಪೂರ ಆರತಿ ನಡೆಸುವ ಹಿಂದಿರುವ ವೈಜ್ಞಾನಿಕ ಕಾರಣ ಗೊತ್ತೆ?

Pinterest LinkedIn Tumblr

ಮಂಗಳೂರು: ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚರಣೆಗಳಿರುವ ವಿಷಯ ಎಲ್ಲರಿಗೂ ಗೊತ್ತು.ಅನಾದಿ ಕಾಲದಿಂದಲೂ ಹಿಂದೂಗಳು ಈ ಆಚರಣೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ದೇವರ ಪೂಜೆ ಮಾಡುವಾಗ ದೀಪ,ಅಗರ ಬತ್ತಿ ಬೆಳಗುವುದು ಕರ್ಪೂರ ಆರತಿ ಮಾಡುತ್ತೇವೆ.ಇವೆಲ್ಲದರ ಹಿಂದೆ ವೈಜ್ಙಾನಿಕ ಕಾರಣಗಳಿವೆಯೆಂಬುದನ್ನು ತಿಳಿದುಕೊಂಡಿದ್ದೇವೆ.ಕರ್ಪೂರ ಆರತಿ ಮಾಡುವುದರಲ್ಲಿ ಅಡಗಿರುವ ವೈಜ್ಞಾನಿಕ ಕಾರಣಗಳೇನು,ಹಾಗೂ ಅದರಿಂದ ನಮಗಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಸಿನಮೋಮಮ್ ಕ್ಯಾಂಫೋರ( Cinnamomum Camphora) ಎಂಬ ವೃಕ್ಷದಿಂದ ಕರ್ಪೂರವನ್ನು ತಯಾರಿಸುತ್ತಾರೆ.ಆದರೆ,ಇದನ್ನು ಹೆಚ್ಚಾಗಿ ಹಿಂದೂಗಳು ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.ಪೂಜಾ ಸಮಯದಲ್ಲಿ ಕರ್ಪೂರವನ್ನು ಆರತಿಯ ರೂಪದಲ್ಲಿ ದೇವರಿಗೆ ಬೆಳಗುವ ಸಮಯದಲ್ಲಿ ಬರುವ ಹೊಗೆ ದೇಹದ ಆರೋಗ್ಯದ ಮೇಲೆ ಸತ್ಪರಿಣಾಮಗಳನ್ನು ಉಂಟುಮಾಡುತ್ತದೆ.

ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ,ಬೆಚ್ಚಿ ಬೀಳುವಿಕೆ,ಹಿಸ್ಟೀರಿಯಾ,ಕೀಲುಗಳನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತ ವಂತೆ.ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ.ಕರ್ಪೂರದ ವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ.ಆದರೆ,ಕರ್ಪೂರದ ವಾಸನೆಯನ್ನು ಸ್ವರ್ಗ ಸುಖಕ್ಕೆ ಹೋಲಿಸುತ್ತಾರೆ.ಇದನ್ನು ಉರಿಸುವುದರಿಂದ ಬೂದಿಉಳಿಯದೆ ಸಂಪೂರ್ಣವಾಗಿ ಉರಿದು ಹೋಗುತ್ತದೆ.ಆದುದರಿಂದ ದೇವರ ಪೂಜೆಯಲ್ಲಿ ಉಪಯೋಗಿಸುತ್ತಾರಂತೆ.

ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಅದೇ ರೀತಿ ಅದರ ಎದುರಿಗೆ ನಿಂತಿರುವವರ ಅಹಂಕಾರವೂ ಉರಿದು ಹೋಗಿ ಪರಿಶುದ್ಧರಾಗುತ್ತಾರಂತೆ. ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಆ ಶಕ್ತಿ ನಮ್ಮಲ್ಲಿ ಪ್ರವೇಶಿಸಿ ನಮಗೆ ಒಳ್ಳೆಯದನ್ನುಂಟುಮಾಡುತ್ತದಂತೆ.

ಇಂತಹ ನಿತ್ಯಬಳಕೆಯ ಕರ್ಪೂರವನ್ನು ಒಂದು ಅಗಲ ಬಾಯಿ ಇರುವ ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಎರಡು ಮಾತ್ರೆ ಕರ್ಪೂರ ಹಾಕಿ ರೂಮಿನಲ್ಲಿ ಇಟ್ಟರಾಯಿತು. ಇದರ ಸುವಾಸನೆಗೆ ಸೊಳ್ಳೆ ಹತ್ತಿರ ಸುಳಿಯದು. ರೂಮಿನ ಗಾತ್ರದ ಮೇಲೆ ಕರ್ಪೂರದ ಬಳಕೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ನಿಧಾನವಾಗಿ ಕರಗುವ ಕರ್ಪೂರ ನೀರಿನಲ್ಲಿ ಆವಿಯಾಗಿ ಇಡಿ ಮನೆಯನ್ನು ಪಸರಿಸುತ್ತದೆ. ತುರ್ತಾಗಿ ಪರಿಣಾಮ ಆಗಬೇಕೆಂದು ಬಯಸುವವರು ಸ್ವಲ್ಪ ಬಿಸಿನೀರನ್ನು ಹಾಕಬಹುದು.

ಸೊಳ್ಳೆ ನಿವಾರಕಕ್ಕೆ ಬಳಸುವ ರಿಪಲ್ಲೆಂಟ್ ನಲ್ಲೆ ಮ್ಯಾಟ್ ಅಥವಾ ಲಿಕ್ವಿಡ್ ಬದಲಿಗೆ ಎರಡು ಬಿಲ್ಲೆ ಕರ್ಪೂರವನ್ನು ಇರಿಸಿ ಸ್ವಿಚ್ ಹಾಕಿ ಅರ್ಧ ಗಂಟೆ ಬಿಟ್ಟರೆ ಸಾಕು ಎಂದು ಹೇಳುತ್ತಾರೆ. ಇದನ್ನು ಬೆಳಿಗ್ಗೆ ಮತ್ತು ಸಂಜೆ ಅರ್ಧ ಘಂಟೆ ಬಳಸಿದರೆ ಸಾಕು ಸೊಳ್ಳೆಯಿಂದ ವಿಮುಕ್ತಿ ಪಡೆಯಬಹುದೆಂದು ಅನುಭವಿಗಳು ಹೇಳುತ್ತಾರೆ.

ಒಮ್ಮೆ ಇದರ ಬಳಕೆ ಮಾಡಿನೋಡಿ ನಿಮಗೆ ತಿಳಿಸುತ್ತಿದ್ದೇನೆ. ನಿಮಗೂ ಉಪಯುಕ್ತವೆನಿಸಿದರೆ ಯಾಕೆ ಉಪಯೋಗ ಮಾಡಬಾರದು? ನಮಗೆ ಇದು ಸಾಧ್ಯ ಎಂದು ಖಾತ್ರಿಯಾದಮೇಲೆ ಮತ್ತೊಬ್ಬರಿಗೂ ಈ ವಿಚಾರ ತಿಳಿಸಬಹುದಲ್ಲವೇ? ಅದಕ್ಕಾಗಿ ಈ ಮಾಹಿತಿಯನ್ನು ತಮ್ಮೊಡನೆ ಹಂಚಿಕೊಂಡಿದ್ದೇನೆ.

ಕೃಪೆ: app2tg

Comments are closed.