ಕರ್ನಾಟಕ

ಬೆಳ್ಳಿ ಕಾಲುಂಗುರ ತೊಡುವುದು ಕೇವಲ ಶೋಕಿಗಲ್ಲ, ಅದರ ಹಿಂದೆ ಆಡಗಿರುವ ವೈಜ್ಞಾನಿಕ ಕಾರಣ ಗೊತ್ತೇ..?

Pinterest LinkedIn Tumblr

ಮಂಗಳೂರು: ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ.ಅದಕ್ಕಾಗಿಯೇ ಕನ್ನಡದಲ್ಲಿ ಹಾಡೊಂದು ಇದೆ “ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ.” ಅಂತ ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಆದರೆ ಇದಕ್ಕೊಂದು ವೈಜ್ಞಾನಿಕ ಕಾರಣ ಇದೆ ಎಂಬುದು ಯಾರಿಗೂ ತಿಳಿದಿರಕ್ಕಿಲ್ಲ.

ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ಮಹಿಳೆಯ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ ಸುಲಭವಾಗುತ್ತದೆ.

ಹೆಬ್ಬೆರಳಿನ ಪಕ್ಕದಲ್ಲಿರುವ ಬೆರಳಿನಲ್ಲೊಂದು ವಿಶೇಷ ನರವಿದ್ದು, ಅದು ಗರ್ಭಕೋಶದೊಂದಿಗೆ ಸಂಪರ್ಕ ಹೊಂದಿರುತ್ತದೆ. ಅದು ಗರ್ಭಕೋಶವನ್ನು ನಿಯಂತ್ರಿಸುತ್ತದೆ. ಅಲ್ಲದೆ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಒತ್ತಡದ ಜೀವನ ಶೈಲಿಯಿಂದಾಗಿ ಮಹಿಳೆಯರು ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಕಾಲುಂಗುರ ಧರಿಸುವುದು ಉತ್ತಮ. ಇದು ಋತುಚಕ್ರ ನಿಯಮಿತ ರೂಪದಲ್ಲಿ ಆಗಲು ಸಹಕಾರಿ. ಸಂತಾನೋತ್ಪತ್ತಿ ಅಂಗಗಳು ಆರೋಗ್ಯವಾಗಿರಲು ಕಾಲುಂಗುರ ನೆರವಾಗುತ್ತದೆ.

ಈಗಿನ ಫ್ಯಾಷನ್ ಯುಗದಲ್ಲಿ ಈ ಕಾಲುಂಗುರಗಳೂ ಆಧುನೀಕತೆಯ ಗಾಳಿಗೆ ಒಳಗಾಗಿ ಮಾರ್ಪಾಡುಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಮಹಿಳೆಯರು ಚಿನ್ನದ ಕಾಲುಂಗುರವನ್ನೂ ತೊಡುತ್ತಿದ್ದಾರೆ.

ಬೆಳ್ಳಿಯು ಒಂದು ಸಮರ್ಥ ವಸ್ತುವಾಗಿದೆ. ಬೆಳ್ಳಿಯನ್ನು ಧರಿಸುವುದರಿಂದ ನಿಮಗೆ ವಿಶ್ವದ ಧನಾತ್ಮಕ ಶಕ್ತಿಯನ್ನು ನೀವು ಪಡೆದುಕೊಳ್ಳಲಿರುವಿರಿ. ಬೆಳ್ಳಿಯ ಕಾಲುಂಗುರವನ್ನು ಧರಿಸುವುದು ನಿಮಗೆ ಧನಾತ್ಮಕ ಶಕ್ತಿಯನ್ನು ಮೇಲ್ಮುಖವಾಗಿ ಹರಿಸಲಿದ್ದು ನಿಮ್ಮ ದೇಹದಿಂದ ಋಣಾತ್ಮಕ ಅಂಶಗಳನ್ನು ಬೆರಳಿನ ಮೂಲಕ ಭೂಮಿಗೆ ಕಳುಹಿಸಲಿದೆ. ನಿಮ್ಮ ದೇಹದಲ್ಲಿ ಬೆಳ್ಳಿಯ ಆಭರಣವನ್ನು ಧರಿಸುವುದು ಉತ್ತಮ ಎಂಬುದಾಗಿ ಆಯುರ್ವೇದ ತಿಳಿಸುತ್ತದೆ.

Comments are closed.