ಕರಾವಳಿ

ಮಂಜು ಕವಿದ ವಾತಾವರಣ : ಮಂಗಳೂರಿಗೆ ವಿಳಂಭವಾಗಿ ಆಗಮಿಸಿದ ವಿಮಾನಗಳು

Pinterest LinkedIn Tumblr

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಲ್ಲಿ ರಾಷ್ಟ್ರಗಳಿಂದ ಬರಬೇಕಾಗಿದ್ದ ಕೆಲವು ವಿಮಾನಗಳು ಗುರುವಾರ ಬೆಳಿಗ್ಗೆ ಮಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಮಂಜು ಕವಿದ ವಾತಾವರಣವಿದ್ದ ಪರಿಣಾಮ ವಿಳಂಬವಾಗಿ ಆಗಮಿಸಿದವು.

ದುಬೈಯಿಂದ ಬೆಳಗ್ಗೆ 8.15ಕ್ಕೆ ಬಂದಿಳಿಯಬೇಕಾಗಿದ್ದ ಜೆಟ್‌ ಏರ್‌ವೆಸ್‌ ವಿಮಾನ ಮಧ್ಯಾಹ್ನ 12.45ಕ್ಕೆ ಆಗಮಿಸಿತ್ತು. 10.15ರ ಮುಂಬಯಿ ಜೆಟ್‌ ಏರ್‌ವೆಸ್‌ ಅಪರಾಹ್ನ 1.45ಕ್ಕೆ ಹಾಗೂ ಬೆಳಗ್ಗೆ 7.30ರ ಬೆಂಗಳೂರು ಜೆಟ್‌ ಏರ್‌ವೆಸ್‌ 9.30ಕ್ಕೆ ಬಂದಿಳಿದಿದೆ.

ಬುಧವಾರ ರಾತ್ರಿ 11 ಗಂಟೆಯ ಮಂಗಳೂರು- ದುಬೈ ಜೆಟ್‌ ಏರ್‌ವೆಸ್‌ ವಿಮಾನ ಮುಂಜಾನೆ 3.30ಕ್ಕೆ ನಿರ್ಗಮಿಸಿದೆ. ಮುಂಬಯಿ ಮತ್ತು ದಿಲ್ಲಿಗಳಲ್ಲಿ ಮಂಜು ಕವಿದ ವಾತಾವರಣ ಇದ್ದ ಕಾರಣ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು ಎನ್ನಲಾಗಿದೆ.

Comments are closed.