ಕರ್ನಾಟಕ

ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ .

Pinterest LinkedIn Tumblr

lizred_catch_1

ಮಂಗಳೂರು: ಈ ಹಲ್ಲಿಗಳು ಮನೆಯಲ್ಲಿ ದೊಡ್ಡ ಸಮಸ್ಯೆಯನ್ನೇ ಉಂಟುಮಾಡುತ್ತದೆ. ಎಷ್ಟು ಓಡಿಸಿದರು ಮತ್ತೆ ಬಂದು ಕಿಟಕಿಯ ಮೇಲೋ ಅಥವಾ ಲೈಟ್‌ ಬಳಿಯೋ ಅಂಟಿಕೊಂಡಿರುತ್ತದೆ. ಈ ಹಲ್ಲಿಗಳು ಮನೆಯಲ್ಲಿರುವ ಸಣ್ಣ ಪುಟ್ಟ ಕೀಟಗಳನ್ನು ತಿಂದು ನಮಗೆ ಸಹಾಯವೇನೋ ಮಾಡುತ್ತದೆ ಆದರೆ ಅದು ಅಲ್ಲಿ ಇಲ್ಲಿ, ಕಿಚನ್‌ನಲ್ಲಿ ಓಡಾಡಿಕೊಂಡಿದ್ದರೆ ತುಂಬಾ ಗಲೀಜು ಎನಿಸುತ್ತದೆ. ಅಲ್ಲದೇ ಅತಿಥಿಗಳ ಮುಂದೆ ಮುಜುಗರವೂ ಆಗುತ್ತದೆ. ಹಾಗಾದರೆ ಈ ಹಲ್ಲಿಗಳನ್ನು ಹೇಗೆ ಓಡಿಸೋದು? ಈ ಕೆಳಗಿನ ಮನೆ ಮದ್ದನ್ನು ಉಪಯೋಗಿಸಿ ಹಲ್ಲಿಯನ್ನು ಇನ್ನಿಲ್ಲದಂತೆ ಮಾಡಿ..

ಕಾಫಿ ಪೌಡರ್‌ :
ಕಾಫಿ ಪೌಡರನ್ನು ಟೊಬಾಕೊ ಪೌಡರ್‌ ಜೊತೆ ಮಿಕ್ಸ್‌ ಮಾಡಿ. ಈ ಮಿಶ್ರಣದ ಸಣ್ಣ ಬಾಲ್‌ಗಳನ್ನು ತಯಾರಿಸಿ. ಟೂಥ್‌ಪಿಕ್‌ ತೆಗೆದುಕೊಂಡು ಆ ಬಾಲ್‌ಗಳನ್ನು ಅದಕ್ಕೆ ಫಿಕ್ಸ್‌ ಮಾಡಿ. ಈ ಟೂಥ್‌ಪಿಕ್‌ಗಳನ್ನು ಹಲ್ಲಿ ಬರುವ ಜಾಗದಲ್ಲಿ ಇಟ್ಟುಬಿಡಿ. ಇದನ್ನು ಸೇವಿಸಿದರೆ ಹಲ್ಲಿಗಳು ಸಾಯುತ್ತದೆ.

ನ್ಯಾಫ್ಥಲಿನ್‌ ಕಾಯಿಲ್‌ :
ನ್ಯಾಪ್ಥಲಿನ್‌ ಕಾಯಿಲ್‌ ಬೆಸ್ಟ್‌ ಪೆಸ್ಟ್‌ ಕಂಟ್ರೋಲರ್‌. ಇದನ್ನು ನಿಮ್ಮ ವಾರ್ಡ್‌ರೋಬ್‌, ನೀರಿನ ಸಿಂಕ್‌ ಮತ್ತು ಸ್ಟೌವಿನ ಅಡಿಯಲ್ಲಿರಿಸಿ. ಇದು ಹಲ್ಲಿಗಳ ವಿರುದ್ಧ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.

ನವಿಲು ಗರಿ :
ಈ ನವಿಲುಗರಿಗಳಿಗೆ ಹಲ್ಲಿಗಳು ಹೆದರುತ್ತವೆ. ನವಿಲುಗರಿಗಳನ್ನು ಹಲ್ಲಿಗಳಿರುವ ಗೋಡೆಯಲ್ಲಿ ಫಿಕ್ಸ್‌ ಮಾಡಿ. ಗಾಳಿ ಬರುವಾಗ ನವಿಲು ಗರಿ ಅಲುಗಾಡುತ್ತದೆ ಇದರಿಂದ ಹಲ್ಲಿಗೆ ಭಯವಾಗುತ್ತದೆ.

ಮೊಟ್ಟೆ ಸಿಪ್ಪೆ :
ಹಲ್ಲಿಗಳಿಗೆ ಸೈಕಾಲಜಿಯಾಗಿ ಮೋಸ ಮಾಡಲು ಮೊಟ್ಟೆ ಸಿಪ್ಪೆಗಳು ಸಹಾಯಕವಾಗಿದೆ. ಈ ಮೊಟ್ಟೆ ಸಿಪ್ಪೆಗಳನ್ನು ನೋಡಿ ಅಲ್ಲಿ ಬೇರೆ ಯಾವುದೋ ದೊಡ್ಡ ಜೀವಿ ಇದೆ ಎಂದು ಭಾವಿಸಿ ಹಲ್ಲಿಗಳು ಅಲ್ಲಿಂದ ಬೇರೆಡೆ ಹೋಗುತ್ತದೆ.

lizred_catch_2

ಕೋಲ್ಡ್‌ ವಾಟರ್‌ :
ಯೆಸ್‌ ಕೋಲ್ಡ್‌ ವಾಟರ್‌ ಮೂಲಕವೂ ನೀವು ಹಲ್ಲಿಯನ್ನು ಓಡಿಸಬಹುದು. ಕೋಲ್ಡ್‌ ನೀರನ್ನು ಹಲ್ಲಿಗಳ ಮೇಲೆ ಸಿಂಪಡಿಸಿ. ಇದರಿಂದ ಅವುಗಳ ಬಾಡಿ ಟೆಂಪ್ರೇಚರ್‌ ಕಡಿಮೆಯಾಗಿ ಅದಕ್ಕೆ ಚಲಿಸಲು ಸಹ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಬಿಸಾಕಿ ಬಿಡಿ.

ಈರುಳ್ಳಿ :
ಈರುಳ್ಳಿಯನ್ನು ಗುದ್ದಿ ಅದರ ರಸವನ್ನು ಗೋಡೆಯ ಮೇಲೆ ಸಿಂಪಡಿಸಿ ಅಥವಾ ಹಲ್ಲಿ ಓಡಾಡುವ ಜಾಗದಲ್ಲಿ – ಅಡಗಿರುವ ಜಾಗದಲ್ಲಿ ಅದನ್ನು ಇಟ್ಟು ಬಿಡಿ. ಈರುಳ್ಳಿಯಲ್ಲಿರುವ ಸಲ್ಫರ್‌ ಕಂಪೌಂಡ್‌ ಕೆಟ್ಟ ಪರಿಮಳವನ್ನು ಹೊರಹಾಕುತ್ತದೆ. ಇದರಿಂದ ಹಲ್ಲಿಗಳು ಓಡುತ್ತದೆ.

lizred_catch_3

ಬೆಳ್ಳುಳ್ಳಿ :
ಸ್ಪ್ರೇ ಬಾಟಲ್‌ ತೆಗೆದುಕೊಂಡು ಅದರಲ್ಲಿ ಈರುಳ್ಳಿ ಜ್ಯೂಸ್‌ ಹಾಕಿ. ನಂತರ ಎರಡು ಮೂರು ಡ್ರಾಪ್‌ ಬೆಳ್ಳುಳ್ಳಿ ರಸವನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದನ್ನು ಮನೆಯ ಮೂಲೆ ಮೂಲೆಗೆ ಅಥವಾ ಹಲ್ಲಿ ಓಡಾಡುವ ಜಾಗದಲ್ಲಿ ಸಿಂಪಡಿಸಿ. ಇದರಿಂದ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.

Comments are closed.