ಮುಂಬೈ

ಜಿರೋ ಫಿಗರ್ ಬೇಬೋ ನ ಕೆಲವು ಇಂಟರೆಸ್ಟಿಂಗ್ ವಿಷಯ ಇಲ್ಲಿದೆ…

Pinterest LinkedIn Tumblr

kareena_bebeo_spl1

ಮುಂಬಯಿ : ಬಾಲಿವುಡ್ ಬೆಬೋ ಕರೀನಾ ಕಾಪೂರ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅತೀ ಬೇಡಿಕೆಯ ನಟಿಯರ ಸಾಲಿನಲ್ಲಿ ನಿಲ್ಲುವ ಈ ಜಿರೋ ಫಿಗರ್ ಬೇಬೋ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಇಂಟರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ.

ತನ್ನ ಬಿಂದಾಸ್ ಮಾತು, ಪ್ರತಿಭೆ ಹಾಗೂ ಲಕ್ಕ್ ನಿಂದಾಗಿ 2002ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಕರೀನಾ ಕಾಪೂರ್, ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಭೇಷ್ ಏನಿಸಿಕೊಂಡಿದ್ದಾರೆ. ಜಿರೋ ಫಿಗರ್ ನಿಂದ ತುಂಬಾನೆ ಪೇಮಸ್ ಆದ 36ರ ಹರೆಯದ ಈ ನಟಿ ಮದುವೆಯಾದ ಮೇಲೂ ಸಾಕಷ್ಟು ಆಫರ್ ಗಳನ್ನು ಪಡೆದುಕೊಂಡಾಕೆ.

ಆದರೆ ತನ್ನ ಅದ್ಬುತ ಸೌಂದರ್ಯದಿಂದ ಗಮನ ಸೆಳೆಯುವ ಈ ನಟಿ, ಪ್ರತಿದಿನ 50 ಸೂರ್ಯ ನಮಸ್ಕಾರವನ್ನು ಮಾಡುತ್ತಾರಂತೆ. ತಮ್ಮ ಸೌಂದರ್ಯದ ಗುಟ್ಟು ಯೋಗಾವಾದರೂ, ಕರೀನಾಗೆ ಯೋಗ ಮಾಡೋದೆಂದರೆ ಬೇಜಾರಂತೆ ಬೋಬೋಗೆ ಇರುವ ಒಂದು ಕೆಟ್ಟ ಅಭ್ಯಾಸವೆಂದರೆ ಉಗುರು ಕಚ್ಚುವುದು.

 kareena_child_wood

ಸಂದರ್ಶನವೊಂದರಲ್ಲಿ ಈ ಕುರಿತಂತೆ ಸ್ಪತಃ ಹೇಳಿಕೆ ನೀಡಿರುವ ಕರೀನಾ, ತನಗೆ ಉಗುರು ಕಡಿಯುವ ಅಭ್ಯಾಸವಿದ್ದು, ಇದೊಂದೆ ನನಗಿರುವ ಕೆಟ್ಟ ಅಭ್ಯಾಸ ಎಂದಿದ್ದಾರೆ.ಚಿಕ್ಕ ವಯಸ್ಸಿನಿಂದಲೂ ಕರೀನಾ ತನಗೆ ಏನಾದರೂ ಬೇಕು ಏನಿಸಿದರೆ ಅದನ್ನು ಪಡೆದೇ ಪಡೆಯುತ್ತಾರಂತೆ. ಬೇಕು ಎನಿಸಿದ್ದನ್ನು ಪಡೆಯಬೇಕು ಎನ್ನುವ ಛಲ ಆಕೆಗೆ 6 ವರ್ಷ ಪ್ರಾಯದಲ್ಲಿದ್ದಾಗಲೇ ಇತ್ತಂತೆ.

ಕರೀನಾ ಕಪೂರ್ ಡಿಸೆಂಬರ್ ತಿಂಗಳಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ ಅದರೆ ಆಕೆಯ ಮೊದಲ ಫ್ರಿಫರೆನ್ಸ್ ಮಾತ್ರ ಅಕ್ಕ ಕರೀಶ್ಮಾ ಕಾಪೂರ್ ಮಕ್ಕಳಿಗೆ. ಈ ಹಿಂದೆ ಒಂದು ಬಾರಿ ಆಕೆ ಮಕ್ಕಳ ಕುರಿತಂತೆ ನೀಡಿದ ಸಂದರ್ಶನದಲ್ಲಿ, ತನಗೆ ತನ್ನ ಸಹೋದರಿ ಮಕ್ಕಳಾದ ಸಮೀರ ಮತ್ತು ಕ್ಯಾನ್ ತುಂಬಾ ಇಷ್ಟ. ನನ್ನ ಸ್ವಂತ ಮಗುವಿಗಿಂತಲೂ ಅವರು ಸ್ಪೇಷಲ್ ಎಂದಿದ್ದರು.ತುಂಬು ಗರ್ಭಿಣಿಯಾಗಿದ್ದರೂ, ಕರೀನಾ, ತುಂಬಾನೆ ಅಕ್ಟೀವ್ ಆಗಿದ್ದು, ಈ ಸಮಯವನ್ನು ಸಂಪೂರ್ಣ ಎಂಜಾಯ್ ಮಾಡುತ್ತಿದ್ದಾರೆ.

kareena_nail_biting

ಕೆಲವೇ ದಿನಗಳಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರುವ ಜಬ್ ವಿ ಮೆಟ್ ನಟಿ, ಕೆಲದಿನಗಳ ಕಾಲ ಪ್ರಾನ್ಸ್ ನಲ್ಲಿ ತನ್ನ ಪತಿ ಸೈಫ್ ಅಲಿ ಖಾನ್ ಜೊತೆಗೆ ದಿನ ಕಳೆಯಲು ನಿರ್ಧರಿಸಿದ್ದಾರೆ.ಜಿರೋ ಫಿಗರ್ ಈ ಬೋಬೋಗೆ ಮನೆಯಲ್ಲಿ ತಯಾರಿಸಿದ ಅಡುಗೆ ಎಂದರೆ ಇಷ್ಟವಂತೆ, ವಿಜಿಟೇಬಲ್, ರೋಟಿ, ದಾಲ್ , ರೈಸ್ ತುಂಬಾ ಇಷ್ಟವಂತೆ. ಶೂಟಿಂಗ್ ಮುಗಿಸಿ ಮನೆಗೆ ಬರುವ ಕರೀನಾಗೆ ಬಿಸಿ ಬಿಸಿ ದಾಲ್ ರೈಸ್ ಮತ್ತು ತುಪ್ಪ ತುಂಬಾನೆ ಫೇವರೆಟ್ ಅಂತೆ.

ಕರೀನಾ ಕಪೂರ್ ಬಳಿ ತುಂಬಾ ಬಗೆಯ ಬೂಟ್ಸ್ ಕಲೆಕ್ಷನ್ ಇದೆಯಂತೆ. ಆಕೆಗೆ ಬೂಟ್ಸ್ ಧರಿಸುವುದು ಎಂದರೆ ಕಂಪರ್ಟ್ ಫಿಲಿಂಗ್ ಅಂತೆ.
ಇತ್ತೀಚಿನ ದಿನಗಳಲ್ಲಿ ಚಿತ್ರದ ನಟ ನಟಿಯರು ತಮ್ಮ ಚಿತ್ರಗಳಿಗೆ ಹಾಡುವುದು ಟ್ರೆಂಡ್ ಆಗಿದೆ. ಇದೀಗ ಕರೀನಾ ಕಾಪೂರ್ ದೇವ್ ಚಿತ್ರದಲ್ಲಿ ಕರೀನಾ ಕಪೂರ್ ಹಾಡೊಂದನ್ನು ಹಾಡಿದ್ದಾರೆ.

Comments are closed.