ಪ್ರಮುಖ ವರದಿಗಳು

ಇಂಥ ಅಂಗಡಿ ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ…ಇಲ್ಲಿ ಮಾಲಿಕನು ಇಲ್ಲ…ಸಿಸಿಟಿವಿಯೂ ಇಲ್ಲ…ಆದರೂ ವ್ಯಾಪಾರ ನಡೆಯುತ್ತೆ…!!!

Pinterest LinkedIn Tumblr

sto

ಐಜ್ವಾಲ: ಈಗಿನ ಕಾಲದಲ್ಲಿ ಅಂಗಡಿಗಳಲ್ಲಿ ಜನರಿದ್ರೂ ಸಿಸಿಟಿವಿ ಅಳವಡಿಸಿದ್ರೂ ಕಳ್ಳತನ ವಾಗುತ್ತೆ. ಆದ್ರೆ ಇಲ್ಲಿ ಮಾತ್ರ ಹಣ್ಣಿನ ಅಂಗಡಿಯಲ್ಲಿ ಸಿಸಿಟಿವಿಯೂ ಇಲ್ಲ, ಅಂಗಡಿಗೆ ಮಾಲೀಕನೂ ಇಲ್ಲ ಆದ್ರೂ ಇಲ್ಲಿ ನ್ಯಾಯಯುತವಾದ ವ್ಯಾಪಾರ ನಡೆಯುತ್ತಿದೆ.

32

34

43

ಹೌದು. ಆಶ್ಚರ್ಯವಾದ್ರೂ ನೀವು ನಂಬ್ಲೇಬೇಕು. ಮಿಜೋರಾಂನಲ್ಲಿ ಇಂತಹದೊಂದು ಹಣ್ಣಿನ ಅಂಗಡಿಯಿದೆ. ರಾಜಧಾನಿ ಐಜ್ವಾಲದಿಂದ 65 ಕಿಮೀ. ದೂರದ ಹೆದ್ದಾರಿಯಲ್ಲಿ ಅಂಗಡಿಗಳಿದ್ದು, ಸಣ್ಣ ವ್ಯಾಪಾರಿಗಳು ಮಾಡಿರುವ ಈ ಅಂಗಡಿಗಳು ವಿಶ್ವಾಸದಿಂದ ನಡೆಯುತ್ತಿವೆ.

ಹೆದ್ದಾರಿಯ ಬದಿಯಲ್ಲಿರುವ ಈ ಅಂಗಡಿಗಳಲ್ಲಿ ತರಕಾರಿಗಳು ಹಾಗೂ ಹಣ್ಣುಗಳನ್ನ ವ್ಯಾಪಾರ ಮಾಡಲಾಗುತ್ತದೆ. ಈ ಅಂಗಡಿಗಳಲ್ಲಿ ಯಾರೂ ಕೂಡ ನಿಂತು ವ್ಯಾಪಾರ ಮಾಡಲ್ಲ. ಬದಲಾಗಿ ಈ ಹಣ್ಣಿನ ಪಕ್ಕದಲ್ಲೇ ಕೆಜಿಗಿಷ್ಟು ಎಂಬಂತೆ ಬೆಲೆಯನ್ನ ಬರೆಯಲಾಗಿರುತ್ತದೆ. ಆ ಪ್ರಕಾರ ಈ ದಾರಿಯಲ್ಲಿ ಓಡಾಡುವ ಜನ ತನಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡಿ ಹಣವನ್ನ ಅಲ್ಲೇ ಇಟ್ಟಿರುವ ಬಾಕ್ಸ್‍ನಲ್ಲಿ ಹಾಕಿ ಹೋಗುತ್ತಾರೆ.

ಇನ್ನೊಂದು ವಿಚಾರವೆಂದರೆ, ಹಣ್ಣು ತರಕಾರಿ ಖರೀದಿ ಮಾಡುವ ಗ್ರಾಹಕರಿಗೆ ಚಿಲ್ಲರೆಗಾಗಿ ಇಲ್ಲಿ ಇನ್ನೊಂದು ಬಾಕ್ಸ್ ಇಟ್ಟಿರಲಾಗುತ್ತದೆ. ಇದರ ಸಹಾಯದಿಂದ ಗ್ರಾಹಕರು ಚಿಲ್ಲರೆ ತೆಗೆದುಕೊಳ್ಳುತ್ತಾರೆ. ಇಂತಹದ್ದೇ ಒಂದು ಅಂಗಡಿ ಬೆಂಗಳೂರಿನಲ್ಲಿಯೂ ಕೂಡ ಇದ್ದು, ಇದಕ್ಕೆ ಟ್ರಸ್ಟ್ ಶಾಪ್ ಎಂಬ ಹೆಸರಿದೆ.

Comments are closed.