ಕನ್ನಡ ವಾರ್ತೆಗಳು

ಸೌರಮಂಡಲದಲ್ಲಿ 1,284 ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ ನಾಸಾದ ಕೆಪ್ಲರ್ ನೌಕೆ : ಅವುಗಳಲ್ಲಿ 9 ವಾಸಕ್ಕೆ ಯೋಗ್ಯವಂತೆ

Pinterest LinkedIn Tumblr

kepler_new_planets_found

ವಾಷಿಂಗ್ಟನ್, ಮೇ.12 : ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾದ ಕೆಪ್ಲರ್ ನೌಕೆ ಸೌರಮಂಡಲದಲ್ಲಿ 1,284 ನೂತನ ಗ್ರಹಗಳನ್ನು ಪತ್ತೆ ಹಚ್ಚಿದ್ದು, ಅವುಗಳಲ್ಲಿ 550 ಭೂಮಿಯ ರೀತಿ ಘನರೂಪಿ ಗ್ರಹಗಳಾಗಿದ್ದರೆ, 9 ಮಾನವ ವಾಸಯೋಗ್ಯ ಗ್ರಹಗಳಾಗಿವೆ ಎಂದು ತಿಳಿಸಿದೆ.

ಪ್ರಿನ್ಸಟನ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡ ಹಾಗೂ ನಾಸಾ ದೊಡ್ಡ ಪ್ರಮಾಣದಲ್ಲಿ ಹೊಸ ಗ್ರಹಗಳನ್ನು ಪತ್ತೆಹಚ್ಚಿರುವುದು ಇದೆ ಮೊದಲಾಗಿದೆ. ಕೆಪ್ಲರ್ ನೌಕೆ ಇಲ್ಲಿಯವರೆಗೂ 2,300 ಕ್ಕೂ ಹೆಚ್ಚು ಹೊಸ ಗ್ರಹಗಳನ್ನು ಪತ್ತೆ ಮಾಡಿದೆ.

ಗ್ರಹಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಕೆಪ್ಲರ್ ನೌಕೆ ಸುಮಾರು ಏಳು ಸಾವಿರ ಸಿಗ್ನಲ್ಗಳನ್ನು ಕಳುಹಿಸಿದ್ದು, ಇವುಗಳಲ್ಲಿ 1,284 ಸಿಗ್ನಲ್ಗಳು ನಿಜವಾದವು ಎಂದು ನಾಸಾ ತಿಳಿಸಿದೆ. ಶೀಘ್ರದಲ್ಲೇ ಭೂಮಿಯ ರೀತಿಯ ಗ್ರಹವನ್ನು ಕಂಡು ಹಿಡಿಯುವ ವಿಶ್ವಾಸ ನಾಸಾ ವಿಜ್ಞಾನಿಗಳದ್ದು.

Write A Comment