ಕನ್ನಡ ವಾರ್ತೆಗಳು

ಪ್ರವಾಸಿಗರ ಅಸಾಮಾನ್ಯ ಗುಡಿಸಲುಗಳು` ವಾಟರ್ ಪ್ರೂಫ್ ಬಬಲ್ ಟೆಂಟ್.

Pinterest LinkedIn Tumblr

babul_tent_photo

ಜೀವನದಲ್ಲಿ ಯಾವುದೇ ಭಯ, ಆತಂಕಗಳಿಲ್ಲದೆ ಆರಾಮವಾಗಿ ಮಲಗಿ ಆಕಾಶ ನೋಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯಲು ಹೋಲಿವೆಬ್ ಎಂಬ ಕಂಪನಿ ಪಾರದರ್ಶಕವಾದ ಬಬಲ್ ಟೆಂಟ್ ತಯಾರು ಮಾಡಿದೆ. ಈ ಬಬಲ್ ಟೆಂಟ್‌ನನ್ನು ಯಾರು ಎಲ್ಲಿಗೆ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು.

ನಾಲ್ಕು ಮೀಟರ್ ಸುತ್ತಳತೆ ಇರುವ ಈ ಟೆಂಟ್‌ನಲ್ಲಿ ಸಾಮಾನ್ಯವಾಗಿ ಇಬ್ಬರು ಆರಾಮವಾಗಿ ನಿದ್ರೆ ಮಾಡಬಹುದಾಗಿದೆ. ಅಲ್ಲದೇ ಇದು ವಾಟರ್ ಪ್ರೂಫ್ ಟೆಂಟ್ ಆಗಿದ್ದು, ಯಾವುದೇ ಸಮಯದಲ್ಲೂ ಇದಕ್ಕೆ ಯಾವುದೇ ರೀತಿಯಾ ಹಾನಿಯಾಗದಂತೆ ತಡೆಯುವ ಶಕ್ತಿಯನ್ನು ಸಹ ಈ ಟೆಂಟ್ ಹೊಂದಿದೆ. ಫ್ರೆಂಚ್ ವಿನ್ಯಾಸಕನಾದ ಪಿಯರ್ ಸ್ಟೀಫನ್ ಡ್ಯುಮಸ್ ಎಂಬವರು ಇದನ್ನು ನಿರ್ಮಾಣ ಮಾಡಿದ್ದು, ಇದಕ್ಕೆ `ಬಬಲ್ ಟ್ರಿ ಕ್ರಿಯೇಷನ್ಸ್` ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ತಾವು ತಯಾರಿಸಿರುವ ಈ ಟೆಂಟ್‌ಗೆ `ಅಸಾಮಾನ್ಯ ರಾತ್ರಿ ಅಸಾಮಾನ್ಯ ಗುಡಿಸಲುಗಳು` ಎಂದು ಟ್ಯಾಗ್ ಲೈನ್ ಸಹ ನೀಡಿದ್ದಾರೆ.

ಈ ಟೆಂಟ್ ಮೂಲಕ ಸುತ್ತಮುತ್ತಲಿನ ನೈಸರ್ಗಿಕವಾದ ವಿಹಂಗಮ ನೋಟವನ್ನು ಸವಿಯಲು ಸಾಧ್ಯವಾಗಿದೆ. ಈ ಟೆಂಟ್‌ನಲ್ಲಿ ನಕ್ಷತ್ರಗಳ ಅಡಿಯಲ್ಲಿ ಒಂದು ರಾತ್ರಿ ಕಳೆಯುವುದು ಹಾಗೂ ಸೂರ್ಯ ಹುಟ್ಟುವುದು, ಮುಳುಗುವುದನ್ನು ನೋಡುವ ಅನುಭವವನ್ನು ಜೀವನ ಪರ್ಯಾಂತ ಯಾರು ಸಹ ಮರೆಯಲಾಗದ ಅಮೂಲ್ಯ ಗಳಿಗೆ ಇದಾಗಿರುತ್ತದೆ ಎಂದು ಸ್ಟೀಫನ್ ವಿವರಿಸುತ್ತಾರೆ.

ಈ ಟೆಂಟ್‌ನಲ್ಲಿ 360 ಡಿಗ್ರಿ ಚಿತ್ರಣವನ್ನು ಸಂಪೂರ್ಣವಾಗಿ ನೋಡಬಹುದು. ಅಲ್ಲದೇ ಯಾವುದೇ ರೀತಿಯ ವಾತಾವರಣಗಳಿಗೂ ಹೊಂದಿಕೊಂಡು ಸಮಸ್ಥಿತಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಟೆಂಟ್ ವಿನ್ಯಾಸ ಗೊಳಿಸಲಾಗಿದೆ.

ಅಲ್ಲದೇ ಸ್ನೇಹಿತರು ತಾವು ಹೊರಗಡೆ ಸಮಯ ಕಳೆಯಬೇಕು ಎಂದು ಬಯಸಿ ಕ್ಯಾಂಪ್‌ಗಳನ್ನು ಹಾಕಿಕೊಂಡು ಸುಂದರವಾದ ಸಮಯವನ್ನು ಟೆಂಟ್‌ಗಳಲ್ಲಿ ಕಳೆಯಬಹುದಾಗಿದೆ.

ಒಮ್ಮೆ ಟೆಂಟ್‌ನ ಒಳಗೆ ಸೇರಿದರೆ ಹೊರಗಡೆ ಉಂಟಾಗುವ ಯಾವುದೇ ಶಬ್ದಗಳು ಪ್ರವಾಸಿಗರಿಗೆ ತೊಂದರೆಯಾಗದಂತೆ ನಿರ್ಮಿಸಿದ್ದು, ಉಸಿರಾಟಕ್ಕೆ, ಓಡಾಟಕ್ಕೆ ಇಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಟೆಂಟ್‌ನಲ್ಲಿ ಪ್ರತ್ಯೇಕವಾದ ಪ್ರವೇಶ ದ್ವಾರವನ್ನು ಅಳವಡಿಸಿದ್ದು ಇದರ ಮೂಲಕ ಸಂಚಾರಿಸಬಹುದಾಗಿದೆ,ಅಲ್ಲದೇ ಪ್ರವಾಸಿಗರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಟೀಫನ್ ತಿಳಿಸುತ್ತಾರೆ.

Write A Comment