ಕರಾವಳಿ

ಸ್ವಾಮೀಜಿ ಅರೆಸ್ಟ್ ಆದ್ಮೇಲೆ ದೊಡ್ಡವರ ಹೆಸರು ಬರುತ್ತೆ; ಇಂದಿರಾ ಕ್ಯಾಂಟಿನ್ ಬಿಲ್ ಬಗ್ಗೆ ಚೈತ್ರಾ ಕುಂದಾಪುರ ಹೇಳಿದ್ದೇನು..?(Video)

Pinterest LinkedIn Tumblr

ಬೆಂಗಳೂರು: ಸ್ವಾಮೀಜಿ ಅರೆಸ್ಟ್ ಆಗಲಿ ಎಲ್ಲ ಸತ್ಯ ಹೊರಬರುತ್ತೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಹೊರಬರುತ್ತೆ ಚೈತ್ರಾ ಕುಂದಾಪುರ ಹೇಳಿದ್ದು ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆತರುವಾಗ ಕ್ಯಾಮೆರಾ ಮುಂದೆ ಆಕೆ ಹೇಳಿದ ವಿಡಿಯೋ ವರದಿಯಾಗಿದೆ.

ಇಂದಿರಾ ಕ್ಯಾಂಟಿನ್ ಬಿಲ್ ಪೆಂಡಿಂಗ್ ಇರೋ ಕಾರಣಕ್ಕೆ ಈ ಷಡ್ಯಂತ್ರ ಪ್ಲ್ಯಾನ್ ಮಾಡಲಾಗಿದೆ. ಸ್ವಾಮೀಜಿ ಸಿಕ್ಕಿ ಹಾಕಿಕೊಂಡರೆ ಎಲ್ಲಾ ಸತ್ಯ ಹೊರಬರುತ್ತದೆ ಎಂದು ಚೈತ್ರಾ ಕಿಡಿಕಾರಿದ್ದಾಳೆ.

ಬೆಂಗಳೂರು ಭಾಗದಲ್ಲಿ ಇಂದಿರಾ ಕ್ಯಾಂಟಿನ್ ಗುತ್ತಿಗೆ ಅಧಾರದಲ್ಲಿ ಗೋವಿಂದ ಪೂಜಾರಿ ನಡೆಸುತ್ತಿದ್ದರು.‌ ಅದರ ಕೋಟಿಗಟ್ಟಲೆ ಬಿಲ್ ಸರಕಾರ ಬಾಕಿಯಿಟ್ಟಿದ್ದು ಅದನ್ನು ಪಡೆಯಲು ಈ ಷಡ್ಯಂತ್ರ‌ ಎಂಬುದು 5 ಕೋಟಿ ಡೀಲ್ ಪ್ರಕರಣದಲ್ಲಿ‌ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಚೈತ್ರಾ ಆರೋಪ.

ಇದಕ್ಕೆ ಪ್ರತಿಕ್ರಿಯಿಸಿರುವ ಗೋವಿಂದ ಬಾಬು ಅವರು ಈ ಪ್ರಕರಣಕ್ಕೂ ಇಂದಿರಾ ಕ್ಯಾಂಟಿನ್ ಬಿಲ್ ವಿಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಎಂದು ವರದಿಯಾಗಿದೆ.

Comments are closed.