ಕರಾವಳಿ

ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡಿರುವ ನರೇಂದ್ರ ಮೋದಿ ಇಂದು ದೇಶದ ಪ್ರಧಾ‌ನಿಯಾದರು: ಆದರ್ಶ ಗೋಖಲೆ (Video)

Pinterest LinkedIn Tumblr

ಕುಂದಾಪುರ: ಇಡೀ ಜಗತ್ತು ಭಾರತದತ್ತ ನೋಡುವಂತೆ ಭಾರತೀಯರನ್ನು ಗೌರವಿಸುವಂತೆ ಮಾಡಿದ ಮಹಾನ್ ಸಂತ ವಿವೇಕಾನಂದರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಹೇಳಿದರು.

ಕುಂದಾಪುರ ಕ್ಷೇತ್ರ ಬಿಜೆಪಿ ಯುವಮೋರ್ಚಾ ವತಿಯಿಂದ ಭಾನುವಾರ ಕುಂದಾಪುರದಲ್ಲಿ ನಡೆದ ವಿವೇಕ ಧ್ವನಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ವಿವೇಕಾನಂದರ ಜನ್ಮದಿನೋತ್ಸವದ ಸಂದರ್ಭ ಸ್ವದೇಶಿ, ಸ್ವಾಭಿಮಾನ ಹಾಗೂ ಸ್ವಾವಲಂಭಿ ಎಂಬ ಮೂರು ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿವೇಕಾನಂದರಿಗೆ ನೀಡುವ ಅತೀ ದೊಡ್ಡ ಕಾಣಿಕೆಯಾಗುತ್ತದೆ. ನಮ್ಮನಮ್ಮ ಮನೆಗಳನ್ನು ಸ್ವದೇಶಿ ಮನೆಯನ್ನಾಗಿಸೋಣ. ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡ ಸುಭಾಷ್ಚಂದ್ರ ಬೋಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು.ಸ್ವಾಮೀ ವಿವೇಕಾನಂದ ಎನ್ನುವ ಆಂಟಿ ವೈರಸ್ ಅನ್ನು ನಮ್ಮ ದೇಹದೊಳಕ್ಕೆ ಚುಚ್ಚಿಕೊಳ್ಳಬೇಕು ಎಂದರು.

ಭಾರತ ಹೊರಗಡೆ ಶತ್ರುಗಳಿಗಿಂತ ಒಳಗಿನ ಶತ್ರುಗಳೊಂದಿಗೆ ಹೋರಾಡುವ ಅನಿವಾರ್ಯತೆಯಿದೆ. ಅದಕ್ಕಾಗಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಭದ್ರವಾಗಿ ಜೋಡಿಸಿಕೊಳ್ಳಬೇಕು. ವಿವೇಕಾನಂದರ ಪುಸ್ತಕಗಳನ್ನು ಮನೆಯಲ್ಲಿಟ್ಟು ಮಕ್ಕಳು ಅದನ್ನು ಓದುವಂತೆ ಮಾಡಬೇಕು. ಮೆಕಾಲೆಯ ಶಿಕ್ಷಣ ಪದ್ದತಿ ಬದಲು ನಾಗರಿಕರ ಶಿಕ್ಷಣ ಪದ್ದತಿ ಜಾರಿಗೆ ಬರಬೇಕು ಎಂದರು.

ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶಾಂತಿನಿಕೇತನ, ಶರತ್ ಶೆಟ್ಟಿ ಉಪ್ಪುಂದ, ಯುವಮೋರ್ಚಾ ಕುಂದಾಪುರ ಕ್ಷೇತ್ರಾಧ್ಯಕ್ಷ ಅವಿನಾಶ್ ಉಳ್ತೂರು, ಪ್ರ. ಕಾರ್ಯದರ್ಶಿ ಚೇತನ ಬಂಗೇರ, ನಗರ ಯುವಮೋರ್ಚಾ ಪ್ರ.ಕಾ. ಸುಕೇಶ್ ಭಂಡಾರ್, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಬ್ರಹ್ಮಾವರ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಗುಣರತ್ನಾ, ಮುಖಂಡರಾದ ಸುರೇಶ್ ಶೆಟ್ಟಿ ಬೀಜಾಡಿ, ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ಸದಾನಂದ ಬಳ್ಕೂರು, ಪೃಥ್ವಿರಾಜ್‌ ಶೆಟ್ಟಿ, ಸುಧೀರ್ ಕೆ.ಎಸ್, ಅರುಣ್ ಬಾಣಾ, ಸುನೀಲ್ ಶೆಟ್ಟಿ ಹೇರಿಕುದ್ರು, ಸುನೀಲ್ ಖಾರ್ವಿ ಉಪಸ್ಥಿತರಿದ್ದರು.

ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುನೀಲ್ ಖಾರ್ವಿ ಸ್ವಾಗತಿಸಿದರು. ರತ್ನಾಕರ ಚರ್ಚ್ ರೋಡ್ ಕಾರ್ಯಕ್ರಮ ನಿರೂಪಿಸಿದರು‌.

Comments are closed.