ಅಂತರಾಷ್ಟ್ರೀಯ

ಮಗನ ಆನ್​ಲೈನ್ ತರಗತಿ ವೇಳೆ ಬೆತ್ತಲೆಯಾಗಿ ತಿರುಗಾಡಿದ ತಾಯಿ ! ವೀಡಿಯೊ ವೈರಲ್

Pinterest LinkedIn Tumblr

ನವದೆಹಲಿ: ಕರೊನಾ ವೈರಸ್​ನಿಂದಾಗಿ ಎಲ್ಲರೂ ಮನೆಯಲ್ಲಿಯೇ ಕೂತು ಕೆಲಸ ಕಾರ್ಯ ಮಾಡುವಂಥ ವಾತಾವರಣ ಸೃಷ್ಟಿಯಾಗಿದ್ದು, ಶಾಲಾ ಮಕ್ಕಳಿಗೂ ಆನ್​ಲೈನ್ ತರಗತಿ ದಿನನಿತ್ಯ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಮಗನ ಆನ್​ಲೈನ್ ತರಗತಿ ನಡೆಯುತ್ತಿದ್ದ ವೇಳೆ ಆತನ ತಾಯಿಯೊಬ್ಬಳು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಈ ವೀಡಿಯೊ ಈಗ ವೈರಲ್ ಆಗಿದೆ.

ಮಗ ಆನ್​ಲೈನ್​ ಕ್ಲಾಸ್​ನಲ್ಲಿ ಬಿಜಿಯಾಗಿರುವಾಗ ತಾಯಿಯೊಬ್ಬಳು ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಸಂಪೂರ್ಣ ಬೆತ್ತಲೆಯಾಗಿ ಓಡಾಡುವ ಮೂಲಕ ಮುಜುಗರ ಉಂಟುಮಾಡಿದ ಘಟನೆ ನಡೆದಿದೆ.

14 ಸೆಕೆಂಡ್​ವುಳ್ಳ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ತೈವಾನ್ ಹೆಸರಿನ ಹುಡುಗ ಬೆರಳು ಮಾಡಿ ಏನೋ ತೊರಿಸುತ್ತಿರುವಂತೆ ಕಾಣುತ್ತದೆ. ಈ ವೇಳೆ ಆತನ ತಾಯಿ ಬೆತ್ತಲೆಯಾಗಿ ದಿಢೀರ್​ ಪ್ರತ್ಯಕ್ಷವಾಗಿ ಕೋಣೆಯಲ್ಲಿ ಏನೋ ಹುಡುಕುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಮಧ್ಯೆ ಶಿಕ್ಷಕಿ ಮಲಗಿರುವ ಹುಡುಗನನ್ನು ಎಚ್ಚರಿಸಲು ಪ್ರಯತ್ನಿಸುವಾಗ ಬೆತ್ತಲೆ ಮಹಿಳೆಯನ್ನು ನೋಡಿ ತೈವಾನ್​ನನ್ನು ಕೂಗಿ ಕ್ಯಾಮೆರಾ ಆಫ್​ ಮಾಡಲು ಸೂಚಿಸುತ್ತಾರೆ. ಇತ್ತ ತೈವಾನ್​ ತಾಯಿಗೆ ಕ್ಯಾಮೆರಾ ಆನ್​ನಲ್ಲಿರುವುದು ಅರ್ಥವಾಗಿ ತಕ್ಷಣ ಓಡಿ ಹೋಗುತ್ತಾರೆ. ಇದಿಷ್ಟು ದೃಶ್ಯದಲ್ಲಿ ರೆಕಾರ್ಡ್​ ಆಗಿದೆ.

ಈ ವಿಡಿಯೋವನ್ನು ಯಂಗ್​ ಸಿಂಬಾ ಹೆಸರಿನ ಟ್ವಿಟರ್​ ಬಳಕೆದಾರರೊಬ್ಬರು ಭಾನುವಾರ ಶೇರ್​ ಮಾಡಿಕೊಂಡಿದ್ದು, ಮೊದಲು ಈ ಜೂಮ್​ ಕ್ಲಾಸ್​ಗಳಿಗೆ ಅಂತ್ಯವಾಡಿ ಎಂದು ಬರೆದುಕೊಂಡಿದ್ದಾರೆ. ವಿಡಿಯೋವನ್ನು ಸುಮಾರು 5 ಮಿಲಿಯನ್​ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಆನ್​ಲೈನ್​ ಕ್ಲಾಸ್​ಗಳಿಗೆ ಕೊನೆಯಾಡಿ ಎಂದು ಯಂಗ್​ ಸಿಂಬಾರಿಗೆ ಧ್ವನಿಗೂಡಿಸಿದ್ದಾರೆ. ಇನ್ನು ಅನೇಕರು ತೈವಾನ್​ ಮುಖ ಭಾವ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇನ್ನೊಂದು ದೃಶ್ಯದಲ್ಲಿ ಹುಡುಗನೊಬ್ಬ ಮಲಗಿರುವುದನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿದೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಜಾಲತಾಣದಲ್ಲಿ ಮಾತ್ರ ಭಾರಿ ವೈರಲ್​ ಆಗಿದ್ದು, ಚರ್ಚೆ ಹುಟ್ಟುಹಾಕಿದೆ.

Comments are closed.