ರಾಷ್ಟ್ರೀಯ

ಮೋದಿ ನೇತೃತ್ವದ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಹೇಗೆ ನಾಶ ಮಾಡಿತು ಎಂಬ ಕುರಿತು ವಿಡಿಯೋ ಸರಣಿ ಆರಂಭಿಸಿದ ರಾಹುಲ್‌ ಗಾಂಧಿ

Pinterest LinkedIn Tumblr

ನವದೆಹಲಿ: ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ತಮ್ಮ ಆರೋಪಗಳನ್ನು ಇನ್ನಷ್ಟು ಬಲಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸೋಮವಾರ ಈ ಸಂಬಂಧ ವಿಡಿಯೋಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಜ್ಜಾಗಿದ್ದು, ಮೋದಿ ನೇತೃತ್ವದ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಹೇಗೆ ನಾಶ ಮಾಡಿತು ಎಂಬ ಕುರಿತು ವಿಡಿಯೋ ಸರಣಿಯನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌, ‘ಮೋದಿ ಸರ್ಕಾರ ಭಾರತೀಯ ಆರ್ಥಿಕತೆಯನ್ನು ಹೇಗೆ ನಾಶ ಮಾಡಿದೆ ಎಂಬುದರ ಕುರಿತ ವಿಡಿಯೋ ಸರಣಿಗಳನ್ನು ವೀಕ್ಷಿಸಿರಿ. ನಾಳೆ ಬೆಳಗ್ಗೆ 10 ಗಂಟೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ವಿಡಿಯೋ ಬರಲಿದೆ’ ಎಂದಿದ್ದಾರೆ.

ಈ ಸರಣಿಯ ಮೊದಲ ವೀಡಿಯೊದ ಟ್ರೈಲರ್ ಅನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅರ್ಥವ್ಯವಸ್ಥಾ ಕಿ ಬಾತ್- ರಾಹುಲ್ ಗಾಂಧಿ ಕೆ ಸಾಥ್’ ಎಂಬುದು ಅದರ ಶೀರ್ಷಿಕೆಯಾಗಿದೆ.

Comments are closed.