ಕುಂದಾಪುರ: ಕುಂದಾಪುರದ ಕೊಡೇರಿಯಲ್ಲಿ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ನಾಡಾ ದೋಣಿ ಸಮುದ್ರದ ಅಲೆಗಳ ರಭಸಕ್ಕೆ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಈ ಘಟನೆ ನಡೆದಿದ್ದು ಹನ್ನೆರಡು ಮಂದಿ ಮೀನುಗಾರರು ಈ ದೋಣಿಯಲ್ಲಿ ಇದ್ದರು ಎಂದು ತಿಳಿದು ಬಂದಿದ್ದು ಇತರ ನಾಲ್ವರು ಪಾರಾಗಿದ್ದು ಅಸ್ವಸ್ಥಗೊಂಡ ಕೆಲ ಮೀನುಗಾರರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಡಾ ದೋಣಿಯಲ್ಲಿ ಒಂದಷ್ಟು ದೋಣಿಯವರು ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಅಲೆಗಳ ರಭಸಕ್ಕೆ ಮುಂಭಾಗದಲ್ಲಿದ್ದ ದೋಣಿ ಮಗುಚಿ ಬಿದ್ದು ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಅಲ್ಲಿಯೇ ಸಮೀಪದಲ್ಲಿದ್ದ ಮೀನುಗಾರ ಮಂದಿ ಇನ್ನುಳಿದವರನ್ನು ರಕ್ಷಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ..
ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಗಂಗೊಳ್ಳಿ ಹಾಗೂ ಬೈಂದೂರು ಪೊಲೀಸರು, ಕರಾವಳಿ ಕಾವಲು ಪಡೆಯವರು ಭೇಟಿ ನೀಡಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
Comments are closed.