ಕರಾವಳಿ

ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಈಗಾಗಲೇ ಸಿಎಂಗೆ ಮನವಿ: ಸಚಿವ ಕೋಟ(Video)

Pinterest LinkedIn Tumblr

ಉಡುಪಿ: ಅಯೋಧ್ಯೆ ರಾಮಮಂದಿರಕ್ಕೆ ಭೂಮಿ ಪೂಜೆ ಹಿನ್ನೆಲೆ ಬುಧವಾರ ಮಧ್ಯಾಹ್ನ ತನ್ನೂರಿನ ಪ್ರಸಿದ್ಧ ದೇವಸ್ಥಾನವಾದ ಕೋಟದ ಹಲವು ಮಕ್ಕಳ ತಾಯಿ ಶ್ರೀ ಅಮೃಥೇಶ್ವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಟುಂಬ ಸಮೇತ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಅವರು, ಭವ್ಯ ರಾಮಮಂದಿರದ ನಿರ್ಮಾಣದ ಕನಸು ಸಾಕಾರಗೊಳ್ಳುವ ಸಮಯ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಅಡಿಗಲ್ಲು ಹಾಕಿದ್ದಾರೆ. ಕರ್ನಾಟಕ ಧಾರ್ಮಿಕ ದತ್ತಿ ಹಾಗೂ ಖಾಸಗಿಯ ಎಲ್ಲಾ ದೇವಸ್ಥಾನಗಳಲ್ಲೂ ಪೂಜೆ ಮತ್ತು ಸಂಕಲ್ಪಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದರು. ಅದರಂತೆಯೇ ಎಲ್ಲಾ ದೇವಸ್ಥಾನದಲ್ಲೂ ಪೂಜಾ-ಸಂಕಲ್ಪ ವಿಧಿವಿಧಾನಗಳು ನಡೆಸಲಾಗಿದೆ. ಹಾಗೆಯೇ ತನ್ನೂರಿನ ದೇವಸ್ಥಾನದಲ್ಲಿ ಪೂಜೆ- ಸಂಕಲ್ಪ ನಡೆಸಲಾಗಿದೆ ಎಂದರು.

ರಾಮ ಮಂದಿರ ಅತ್ಯಂತ ಭವ್ಯವಾಗಿ ಮೂಡಿಬರಲಿದೆ. ಅಯೋಧ್ಯೆಗೆ ತೆರಳುವ ಕರ್ನಾಟಕ ಯಾತ್ರಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಭವನ ನಿರ್ಮಾಣಕ್ಕೆ ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.