ಕರಾವಳಿ

2nd ಪಿಯುಸಿ ಕಾಮರ್ಸ್’ನಲ್ಲಿ ರಾಜ್ಯಕ್ಕೆ 4th ರ್‍ಯಾಂಕ್ ಪಡೆದ ಕುಂದಾಪುರದ ಸ್ವಾತಿ ಪೈಗೆ ಸಿಎ ಆಗುವ ಕನಸು(Video)

Pinterest LinkedIn Tumblr

ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಕುಂದಾಪುರದ ಸ್ವಾತಿ ಪೈ 594 (99%) ಅಂಕ ಪಡೆದು ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದಿದ್ದಾರೆ. ರಾಜ್ಯಕ್ಕೆ 4 ರ್‍ಯಾಂಕ್ ಪಡೆದಿರುವ ಇವರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿ ಜವಳಿ ಉದ್ಯಮಿ ನಡೆಸುತ್ತಿರುವ ಶಿವಾನಂದ ಪೈ ಮತ್ತು ಶಿಲ್ಪಾ ಪೈ ಅವರ ಪುತ್ರಿ.

ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾತಿ ಪೈ, ನನಗೆ ರ್‍ಯಾಂಕ್ ಬರಲು ಕಾಲೇಜಿನಿಂದ ಹಾಗೂ ಮನೆಯವರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ನಾನು ನಿತ್ಯವೂ ಅಭ್ಯಾಸ ಮಾಡುತ್ತಿದ್ದೆ. ಪ್ರಾಕ್ಟಿಕಲ್ ವಿಷಯಗಳನ್ನು ತರಗತಿ ಮುಗಿದ ನಂತರವೂ ಅಭ್ಯಾಸ ಮಾಡುತ್ತಿದ್ದೆ. ನಮಗೆ ರ್‍ಯಾಂಕ್ ಸಿಗುವ ಹಾಗೇ ಕಾಲೇಜಿನಿಂದ ತಯಾರಿ ಮಾಡಿಸುತ್ತಿದ್ದು ನಾನು ಕೂಡ ರ್‍ಯಾಂಕ್‍ನ ನಿರೀಕ್ಷೆಯಲ್ಲಿದ್ದೆ. ಮುಂದೆ ನಾನು ಸಿ.ಎ ಮಾಡಬೇಕು ಅಂದುಕೊಂಡಿದ್ದೇನೆ. ಅದಕ್ಕೆ ಈಗಾಗಲೇ ಆನ್‍ಲೈನ್ ಮೂಲಕ ತರಬೇತಿ ಪಡೆದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ. ಇಂಗ್ಲೀಷ್ ಪರೀಕ್ಷೆ ಮುಂದೂಡಿ ಸ್ವಲ್ಪ ಭಯವಿತ್ತು. ಆದರೆ ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ನಾವು ನಿರ್ಭಯವಾಗಿ ಪರೀಕ್ಷೆ ಬರೆದೆವು ಎನ್ನುತ್ತಾರೆ.

ಇನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 618 ಅಂಕ ಪಡೆದ ಸ್ವಾತಿ ಪೈ ಎಲ್.ಕೆ.ಜಿ. ಇಂದಲೂ ವೆಂಕಟರಮಣ ಶಾಲೆಯಲ್ಲಿಯೇ ಕಲಿತವರು. ಅವರ ಹಿರಿಯ ಸಹೋದರಿ ಶ್ರೇಯಾ ಪೈ ಆರ್ಕಿಟೆಕ್ಚರ್ ವ್ಯಾಸಂಗ ಮಾಡುತ್ತಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.