ಕರಾವಳಿ

ಕುಂದಾಪುರದಲ್ಲಿ ಚೂಡಾಮಣಿ ಗ್ರಹಣ ಎಫೆಕ್ಟ್: ಬೀಕೋ ಎಂದ ನಗರ, ಗ್ರಾಮೀಣ ಭಾಗಗಳು (Video)

Pinterest LinkedIn Tumblr

ಕುಂದಾಪುರ : ಭಾನುವಾರ ನಡೆದ ಸೂರ್ಯ ಗ್ರಹಣದ ವೇಳೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಬಹುತೇಕ ದೇವಸ್ಥಾನಗಳಲ್ಲಿ ಎಂದಿನಂತೆ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿತು.

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಗ್ರಹಣ ಕಾಲದಲ್ಲಿ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸ್ಥಳೀಯ ಪರಿಸರದ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದುಕೊಂಡಿದ್ದರು. ಗ್ರಹಣ ಮೋಕ್ಷ ಕಾಲದಲ್ಲಿ ದೇವಾಲಯಗಳನ್ನು ಶುಚಿಗೊಳಿಸಿ ವಿಶೇಷ ಹೋಮ–ಹವನ ಹಾಗೂ ಪೂಜೆಗಳನ್ನು ನಡೆಸಲಾಯಿತು. ಗ್ರಹಣ ಮೋಕ್ಷದ ಬಳಿಕ ಭಕ್ತರು ದೇವಾಲಯಗಳಿಗೆ ಬಂದು ದೇವರ ದರ್ಶನ ಪಡೆದುಕೊಂಡರು. ಗ್ರಹಣದ ಕಾರಣದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯಗಳಿಂದ ದೂರವೇ ಉಳಿದು, ಮನೆಯಲ್ಲಿ ಟಿವಿ ವೀಕ್ಷಣೆಯೊಂದಿಗೆ ಗ್ರಹಣ ಪರ್ವ ಪೂರೈಸಿದ್ದಾರೆ.

ಗ್ರಹಣ, ಭಾನುವಾರ ಹಾಗೂ ಕೋವಿಡ್‌.19 ಎಲ್ಲದರ ಕಾರಣಕ್ಕೋ ಏನೋ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ವಾಹನ ಹಾಗೂ ಜನ ಸಾಮಾನ್ಯರ ಓಡಾಟ ಕಡಿಮೆಯಿತ್ತು. ನಗರದಲ್ಲಿನ ಅಂಗಡಿ–ಮುಗ್ಗಟ್ಟುಗಳು ಎಂದಿನಂತೆ ಭಾನುವಾರದ ಹರತಾಳವನ್ನು ಮಾಡಿದ್ದರಿಂದ ಜನರ ಖರೀದಿ ಭರಾಟೆಯೂ ಇರಲಿಲ್ಲ.

Comments are closed.