ಕರಾವಳಿ

ಉಡುಪಿಯಲ್ಲಿ ಶನಿವಾರವೂ ಕೊರೊನಾ ಸ್ಫೋಟ; 121 ಪಾಸಿಟಿವ್ ಪ್ರಕರಣ ದೃಢ (Video)

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಕೊರೊನಾ ಪ್ರಕರಣಗಳು ನಿತ್ಯವೂ ಹೆಚ್ಚುತ್ತಲೇ ಇದೆ. ಈಗಾಗಲೇ ರಾಜ್ಯದಲ್ಲಿ ಅತೀ ಹೆಚ್ಚು ಕೋರೊನಾ ಸೋಂಕಿತರು ಉಡುಪಿ ಜಿಲ್ಲೆಯಲ್ಲಿದ್ದು ಕರಾವಳಿಯ ಉಡುಪಿ ಪ್ರಥಮ ಸ್ಥಾನದಲ್ಲಿದೆ. ಶನಿವಾರ ಮತ್ತೆ ಪುನಃ ಒಂದೇ ದಿನ ಜಿಲ್ಲೆಯಲ್ಲಿ 121 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇಂದಿನ ಪ್ರಕರಣಗಳನ್ನು ಸೇರಿಸಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 101 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 103 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 785 ಸಕ್ರೀಯ ಪ್ರಕರಣಗಳಿದ್ದು, ಓರ್ವ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ.

Comments are closed.