ರಾಷ್ಟ್ರೀಯ

ಮದುವೆ ಮನೆಯಲ್ಲಿ ಡ್ಯಾನ್ಸ್ ನಿಲ್ಲಿಸಿದ ನೃತ್ಯಗಾರ್ತಿ ಮುಖಕ್ಕೆ ಗುಂಡು ಹೊಡೆದ ಭೂಪ ! ಮುಂದೆ ಏನಾಯಿತು ಈ ವಿಡಿಯೋ ನೋಡಿ !

Pinterest LinkedIn Tumblr

ಲಖನೌ: ಮದುವೆ ಸಂಭ್ರಮಕ್ಕೆ ಕಾರಣವಾಗಬೇಕಿತ್ತು. ಆದರೆ ಡ್ಯಾನ್ಸ್ ಮಾಡಲು ಕರೆಸಿದ್ದ ನೃತ್ಯಗಾರ್ತಿಗೆ ವೇದಿಕೆ ಮೇಲೆ ಯುವಕನೋರ್ವ ಮುಖಕ್ಕೆ ಗುಂಡು ಹಾರಿಸಿರುವ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ವೇದಿಕೆ ಮೇಲೆ ಕುಣಿಯುತ್ತಿದ್ದ ನೃತ್ಯಗಾರ್ತಿಗೆ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸದಂತೆ ಧಮ್ಕಿ ಹಾಕಿದ್ದಾನೆ. ನೃತ್ಯ ಮಾಡುವುದನ್ನು ನಿಲ್ಲಿಸಿದರೆ ಗುಂಡು ಹೊಡೆಯುವುದಾಗಿ ಬೆದರಿಸಿದ್ದಾನೆ.

ಈ ಮಾತುಗಳು ಕೇಳಿಬರುತ್ತಿದ್ದಂತೆ ವೇದಿಕೆ ಮೇಲಿದ್ದ ನೃತ್ಯಗಾರ್ತಿಯರು ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ್ದಾರೆ. ಕೂಡಲೇ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು ಅದು ನೃತ್ಯಗಾರ್ತಿಯ ಮುಖಕ್ಕೆ ತಗುಲಿ ಆಕೆ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾಳೆ.

ಇನ್ನು ಗಂಭೀರವಾಗಿ ಗಾಯಗೊಂಡಿರುವ ನೃತ್ಯಗಾರ್ತಿಗೆ ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆಗುಂತಕ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದು ಆತನ ಪತ್ತೆಯಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Comments are closed.