ಕರಾವಳಿ

ಬೀಜಾಡಿ-ಗೋಪಾಡಿಯಲ್ಲಿ ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞದಲ್ಲಿ ಅಯೋಧ್ಯೆ ರಾಮಮಂದಿರದ ಸಂಕಲ್ಪ- ಇಂದಿಗೆ ಒಂದು ವರ್ಷ!

Pinterest LinkedIn Tumblr

ಕುಂದಾಪುರ: ಸರಿಯಾಗಿ ಇಂದಿಗೆ ಒಂದು ವರ್ಷ….ಅಂದರೆ 2018ರ ನ.9 ರಂದು ಕುಂದಾಪುರ ತಾಲೂಕಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ “ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞ”ದಂದು ರಾಮಮಂದಿರ ನಿರ್ಮಾಣ ಸಂಕಲ್ಪ‌ಮಾಡಲಾಗಿದ್ದು ಇಂದಿಗೆ ಒಂದು ವರ್ಷ ಕಳೆದು ಅಯೋಧ್ಯೆ ವಿಚಾರ ಸುಪ್ರೀಂನಲ್ಲಿ ಇತ್ಯರ್ಥಗೊಂಡಿದೆ.

ಸದ್ಯ ಗೋಪಾಡಿ-ಬೀಜಾಡಿ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞದ ವೇಳೆ ಧಾರ್ಮಿಕ ವಿಧಾನ ನಡೆಸಿದ ವಿದ್ವಾಂಸರು ಹೇಳಿದ ಮಾತಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಜ್ಞ ಫಲ ದೊರಕಿದೆ ಎಂದು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.

(ಸಂಗ್ರಹ ಚಿತ್ರಗಳು- 09/11/2018)

ಅಯೋಧ್ಯಾ ತೀರ್ಪು ಸ್ವಾಗತ….
ಬಹಳಷ್ಟು ಕಾಲದಿಂದ ನೆನೆಗುದಿಗೆ ಬಿದ್ದಿರುವ ಅಯೋಧ್ಯಾ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪನ್ನು ನೀಡಿ ವಿವಾದಕ್ಕೆ ತೆರೆ ಎಳೆದಿರುವುದು ಸ್ವಾಗತಾರ್ಹ.ಈ ತೀರ್ಪಿನಿಂದ ಯಾವುದೇ ಸಮುದಾಯಕ್ಕೆ ಸೋಲು ಗೆಲುವಿನ ಪ್ರಶ್ನೆ ಉದ್ಭವವಾಗುವುದಿಲ್ಲಾ.ದೇಶದಲ್ಲಿ ಸಮಾಜದಲ್ಲಿ ಸೌಹಾರ್ದಯುತವಾತ ವಾತಾವರಣ ನಿರ್ಮಾಣವಾಗಲು ದಾರಿ ದೀಪವಾಗಿದೆ. ಕಳೆದ ವರ್ಷ ನವೆಂಬರ್ 9 ರಂದು ಬೀಜಾಡಿ ಗೋಪಾಡಿ ಯಲ್ಲಿ ನಡೆದ ಶ್ರೀ ರಾಮ ಭಜನಾ ಮಂಡಳಿಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಜರುಗಿದ ಶ್ರೀರಾಮ ತಾರಕ ಮಂತ್ರ ಕೋಟಿ ಲೇಖನ ಯಜ್ಞದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದು ಉಲ್ಲಖನೀಯ ಹಾಗೂ ಸ್ಮರಣೀಯ ಎಂದು ಅಮೃತಮಹೋತ್ಸವ ಸಮಿತಿಯ ಪ್ರಮುಖರಾದ ಗಣೇಶ್ ಪುತ್ರನ್ ತಿಳಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.