ವೀಡಿಯೋ ವರದಿಗಳು

ನಿವೃತ್ತ ನ್ಯಾಯಮೂರ್ತಿಯಿಂದ ಸೊಸೆಗೆ ವರದಕ್ಷಿಣೆ ಕಿರುಕುಳ, ಹಲ್ಲೆ; ವಿಡಿಯೋ ಬಿಡುಗಡೆ

Pinterest LinkedIn Tumblr

ಹೈದರಾಬಾದ್​ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅವರ ಸೊಸೆಗೆ ಗಂಡನ ಮನೆಯವರು ದೈಹಿಕವಾಗಿ ಥಳಿಸುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿ ಹಾಗೂ ಹಿರಿಯ ದಂಪತಿಗಳು ಮಹಿಳೆಯ ಕತ್ತನ್ನು ಹಿಡಿದು, ನೆಲದ ಉರುಳಾಡಿಸಿ ದೈಹಿಕವಾಗಿ ಹಲ್ಲೆ ಮಾಡುತ್ತಿರುವ ದೃಶ್ಯಗಳು ಮನೆಯ ಸಿಸಿಟಿವಿಯಲ್ಲಿ ದಾಖಲಾಗಿವೆ. ಥಳಿತಕ್ಕೆ ಒಳಗಾದ ಮಹಿಳೆಯ ಇಬ್ಬರು ಚಿಕ್ಕ ಮಕ್ಕಳನ್ನು ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.

30 ವರ್ಷದ ಸಿಂಧೂ ಶರ್ಮಾ ಎಂಬುವವರೇ ಅತ್ತೆ, ಮಾವ ಹಾಗೂ ಗಂಡನಿಂದ ದೌರ್ಜನ್ಯಕ್ಕೆ ಒಳಗಾದ ಬಳಿಕ ಎಲ್ಲರ ಮೇಲೆ ವರದಕ್ಷಿಣಿ ಕಿರುಕುಳ ದೂರು ದಾಖಲಿಸಿ, ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ನೀಡಿದ್ದಾರೆ.

ಮಾವ ನ್ಯಾ.ನೂಟಿ ರಾಮಮೋಹನ್​ ರಾವ್​, ಅವರ ಹೆಂಡತಿ ನೂಟಿ ದುರ್ಗಾ ಜಯಲಕ್ಷ್ಮೀ, ಮತ್ತು ಅವರ ಮಗ/ ಆಕೆಯ ಗಂಡ ನೂಟಿ ವಸಿಷ್ಠ ವರದಕ್ಷಿಣಿಗಾಗಿ ನಿರಂತರವಾಗಿ 4 ವರ್ಷಗಳಿಂದ ದೈಹಿಕ ದೌರ್ಜನ್ಯ ಎಸಗಿಕೊಂಡು ಬಂದಿದ್ದಾರೆ ಎಂದು ಸಿಂಧೂ ಆರೋಪಿಸಿದ್ದಾರೆ.

ಹೈದರಾಬಾದ್​ ಹೈಕೋರ್ಟ್​ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿದ್ದ ರಾಮಮೋಹನ್​ ರಾವ್​, 2017ರ ಆಗಸ್ಟ್​ ನಂದು ನಿವೃತ್ತರಾಗಿದ್ದಾರೆ. ಮದ್ರಾಸ್​ ಹೈಕೋರ್ಟ್​ನಲ್ಲಿ ನ್ಯಾಯಮೂರ್ತಿಯಾಗಿದ್ದ ಇವರು 2016ರಲ್ಲಿ ಹೈದರಾಬಾದ್​ ಹೈಕೋರ್ಟ್​ಗೆ ವರ್ಗಾವಣೆಯಾಗಿದ್ದರು.

ಕಳೆದ ಏಪ್ರಿಲ್​ನಲ್ಲಿ ಸಿಂಧೂ ಮನೆಯಿಂದ ಹೊರಗೆ ಬಂದು ದೂರು ನೀಡಿದ್ದರು. ಅಷ್ಟೇ ಅಲ್ಲದೇ ಮನೆಯ ಮುಂದೆಯೇ ಪ್ರತಿಭಟನೆ ನಡೆಸಿ, ತನ್ನ ಇಬ್ಬರು ಮಕ್ಕಳನ್ನು ಒಪ್ಪಿಸುವಂತೆ ಆಗ್ರಹಿಸಿದ್ದರು. ಹೆಬಿಯಸ್​ ಕಾರ್ಪಸ್​ ಅರ್ಜಿ ಸಹಾಯದಿಂದ ಇಬ್ಬರು ಮಕ್ಕಳನ್ನು ತಾಯಿಯ ಸುಪರ್ದಿಗೆ ವಹಿಸಲಾಯಿತು.

ಕಳೆದ ಏಪ್ರಿಲ್​ನಲ್ಲಿ ಸಿಂಧೂ ಮನೆಯಿಂದ ಹೊರಗೆ ಬರುವ ಮುನ್ನ ನಡೆದ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಆ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಆ ಕೆಟ್ಟ ದುಃಸ್ವಪ್ನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಕಳೆದ ಏಪ್ರಿಲ್​ನಲ್ಲಿ ನಾನು ಮನೆ ಬಿಡುವ ಮುನ್ನ ನಡೆದ ಘಟನೆ ಅದು. ಆ ಮನೆಯಲ್ಲಿ ಎಲ್ಲರೂ ಸೇರಿ ನನಗೆ ಥಳಿಸಿದರು ಎಂದು ಸಿಂಧೂ ದುಃಖ ತೊಡಿಕೊಂಡರು.

Comments are closed.