ರಾಷ್ಟ್ರೀಯ

ದುಬೈನಿಂದ ಗೋವಾಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಮದ್ಯಕ್ಕಾಗಿ ಗಗನಸಖಿಯ ಮೇಲೆ ಹಲ್ಲೆ ನಡೆಸಿದ ಮಹಿಳೆ !

Pinterest LinkedIn Tumblr

ಗೋವಾ: ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಮಹಿಳೆಯನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ದುಬೈನಿಂದ ಗೋವಾಕ್ಕೆ ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದ ಏರ್​ ಇಂಡಿಯಾ ವಿಮಾನ ಎಐ-994 ದಲ್ಲಿ ಘಟನೆ ನಡೆದಿದೆ. ಗೋವಾದಲ್ಲಿ ವಿಮಾನದಿಂದ ಇಳಿಯುತ್ತಲೇ ಏರ್​ಪೋರ್ಟ್​ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಆರೋಪಿ ಮಹಿಳೆ ತನ್ನ ಪತಿಯೊಂದಿಗೆ ವಿಮಾನದಲ್ಲಿ ಬಿಜಿನೆಸ್​ ಕ್ಲಾಸ್​ ಸೀಟ್​ನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಳು. ಆಕೆ ಅದಾಗಲೇ ಮದ್ಯಪಾನ ಮಾಡಿದ್ದಳು. ಅಷ್ಟಲ್ಲದೆ ಗಗನಸಖಿಯ ಬಳಿ ಇನ್ನೂ ಜಾಸ್ತಿ ಮದ್ಯ ನೀಡುವಂತೆ ಪೀಡಿಸಿದಳು. ಆದರೆ, ಗಗನಸಖಿ ಹಾಗೂ ವಿಮಾನ ಸಿಬ್ಬಂದಿ, ವಿಮಾನ ಹಾರಾಟ ಮಾಡುತ್ತಿದ್ದ ವೇಳೆ ಹೆಚ್ಚು ಪ್ರಮಾಣದ ಅಲ್ಕೋಹಾಲ್​ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಅಷ್ಟಕ್ಕೆ ಕೋಪಗೊಂಡ ಆಕೆ ಗಗನಸಖಿಯನ್ನು ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಾಗಾಗಿ ಗೋವಾದಲ್ಲಿ ವಿಮಾನ ಲ್ಯಾಂಡ್ ಆಗುತ್ತಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

Comments are closed.