ಮನೋರಂಜನೆ

ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳ ಕಾದಾಟವನ್ನು ವೀಡಿಯೊ ಮಾಡಿದ ನಟ ನೀಲ್ ನಿತಿನ್ ಮುಖೇಶ್

Pinterest LinkedIn Tumblr

ಮುಂಬೈ: ವಿಷಪೂರಿತ ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳು ಕಾದಾಟ ನಡೆಸುತ್ತಿರುವ ಭಯಾನಕ ವಿಡಿಯೋವನ್ನು ನಟ ನೀಲ್ ನಿತಿನ್ ಮುಖೇಶ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/B2Zg2kSH1Eu/?utm_source=ig_embed

ವಿಡಿಯೋದಲ್ಲಿರುವಂತೆ ಹಾವಿನ ಸುತ್ತ ಇರುವ ನಾಲ್ಕು ಬೆಕ್ಕುಗಳು ಕುತೂಹಲದಿಂದ ನೋಡುತ್ತಿವೆ. ಹಾವು ಎಲ್ಲೂ ಹೋಗದಂತೆ ಅಡ್ಡ ಹಾಕಿವೆ.ಈ ಪೈಕಿ ಒಂದು ಬೆಕ್ಕು ಹಾವನ್ನು ಕೆಣಕುತ್ತದೆ. ಹೆಡೆ ಎತ್ತಿದ ಹಾವು ಹೋಗುತ್ತಿದ್ದರೆ ಅದರ ಹಿಂದೆಯೇ ಮೂರು ಬೆಕ್ಕುಗಳು ಹೋಗುತ್ತಿವೆ. ನಂತರ ಆ ಹಾವು ಅಲ್ಲಿಯೇ ಇದ್ದ ಪಾರ್ಕ್ ಕಡೆ ನುಸುಳುತ್ತದೆ.

ನೀಲ್ ನಿತಿನ್ ಮುಖೇಶ್ ಮುಂದಿನ ಸಿನಿಮಾ’ ಬೈ ಪಾಸ್ ರೋಡ್ ‘ ಚಿತ್ರೀಕರಣಕ್ಕಾಗಿ ಆಗಮಿಸಿದ ವೇಳೆ ಈ ಭಯಾನಕ ವಿಡಿಯೋವನ್ನು ಮಾಡಿದ್ದಾರೆ. ಸುಮಾರು 77 ಸಾವಿರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ ಎಂದು ನೀಲ್ ನಿತಿನ್ ಮುಖೇಶ್ ಪ್ರತಿಕ್ರಿಯಿಸಿದ್ದಾರೆ.

Comments are closed.