ಅಂತರಾಷ್ಟ್ರೀಯ

ಸೆಕ್ಸ್ ವೀಡಿಯೊ ನೋಡುವ ವೀಕ್ಷಕರೇ ಎಚ್ಚರ ! ನಿಮ್ಮ ವಿಡಿಯೋ ಕೂಡ ವಂಚಕರ ಕೈ ಸೇರಬಹುದು !

Pinterest LinkedIn Tumblr

ಸೈಬರ್ ವಂಚನೆ ಪ್ರಕರಣ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹಲವು ವಿಧಾನಗಳ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ಹ್ಯಾಕರುಗಳು ಇದೀಗ ಹಣ ದೋಚಲು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ.

ಪೋರ್ನ್​ ವಿಡಿಯೋ ವೀಕ್ಷಕರನ್ನೇ ಗುರಿಯಾಗಿಸಿ ಆನ್​ಲೈನ್ ಮೂಲಕ ವಂಚಿಸುವ ಪ್ರಕರಣವೊಂದು ಐರ್ಲೆಂಡ್​ನಲ್ಲಿ ವರದಿಯಾಗಿದೆ.

ಇಲ್ಲಿ ಆನ್​ಲೈನ್ ವಂಚಕರು ಸೆಕ್ಸ್ ವಿಡಿಯೋಗಳನ್ನು ವೀಕ್ಷಿಸುವ ಜನರನ್ನು ಗುರಿಯಾಗಿಸುತ್ತಾರೆ. ಪೋರ್ನ್​ ಸೈಟ್​ ಮೂಲಕ ಜನರ ಮೇಲ್​ ಐಡಿ ಮೇಲೆ ಕನ್ನ ಹಾಕುವ ಇವರು.

ವೀಕ್ಷಕರಿಗೆ ಲಿಂಕ್​ವೊಂದನ್ನು ಕಳುಹಿಸುತ್ತಾರೆ. ಈ ಲಿಂಕ್​ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ಕದೀಮರ ಪಾಲಾಗುತ್ತದೆ.

ಮಕ್ಕಳ ಸೆಕ್ಸ್ ವಿಡಿಯೋ ಲಿಂಕ್ ಮೂಲಕ ಆಕರ್ಷಿಸುವ ಇವರು , ನಿಮ್ಮನ್ನು ಲಿಂಕ್ ಕ್ಲಿಕ್ ಮಾಡುವಂತೆ ಪ್ರೇರೆಪಿಸುತ್ತಾರೆ.

ಈ ಲಿಂಕ್ ಕ್ಲಿಕ್ ಮಾಡಿದರೆ ಸುಲಭವಾಗಿ ಹ್ಯಾಕರುಗಳು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಕ್ಯಾಮೆರಾವನ್ನು ಹ್ಯಾಕ್ ಮಾಡುತ್ತಾರೆ.

ಆ ಮೂಲಕ ನಿಮ್ಮ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡುವ ಇವರು, ನಿಮ್ಮ ಮಾಹಿತಿಯನ್ನೇ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಾರೆ.

ಅದರಲ್ಲೂ ನೀವು ನೋಡಿದ ವಿಡಿಯೋ, ಹಾಗೂ ನೀವೇನು ಮಾಡುತ್ತಿದ್ದೀರಾ ಎಂಬುದನ್ನೆಲ್ಲಾ ಹ್ಯಾಕರುಗಳ ತಂಡ ರೆಕಾರ್ಡ್​ ಮಾಡಿಕೊಳ್ಳುತ್ತಾರೆ.

ಹೀಗೆ ರೆಕಾರ್ಡ್​ ಮಾಡಿಕೊಂಡ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಐರ್ಲೆಂಡ್​ನ ವ್ಯಕ್ತಿಯೊಬ್ಬರಿಂದ ವಂಚಕರ ತಂಡವೊಂದು ಸುಮಾರು 5 ಸಾವಿರ ಯುರೋಗಳಿಗೆ ಬೇಡಿಕೆ ಇಟ್ಟಿದ್ದರು.

ಈ ಮೊತ್ತವನ್ನು ಬಿಟ್ ಕಾಯಿನ್ ( ಡಿಜಿಟಲ್ ಮನಿ) ಮೂಲಕ ಪಾವತಿಸಲು ತಿಳಿಸುವ ಈ ತಂಡ ತಮ್ಮ ಮಾಹಿತಿಯು ಎಲ್ಲೂ ಹೊರಬೀಳದಂತೆ ನೋಡಿಕೊಳ್ಳುತ್ತಾರೆ.

ಇಂತಹ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿ ಬಳಕೆದಾರನ ಪಾಸ್​ವರ್ಡ್​, ಅಧಿಕೃತ ಮಾಹಿತಿ ಸೇರಿದಂತೆ ಸಂಪೂರ್ಣ ವಿವರಗಳನ್ನು ಹ್ಯಾಕರ್ ಶೇಖರಿಸಿಟ್ಟುಕೊಳ್ಳುತ್ತಾರೆ.

ಅದರಲ್ಲೂ ನಿಮ್ಮ ಖಾಸಗಿ ವಿಷಯಗಳು ಹಾಗೂ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸುತ್ತಾರೆ. ಈ ಮೂಲಕ ಹೆದರಿಸಿ ನಿಮ್ಮ ಮುಂದೆ ಹಣ ಬೇಡಿಕೆ ಇಡುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಂತಹ ಇ-ಮೇಲ್ ಲಿಂಕ್ ವಿಶ್ವದೆಲ್ಲೆಡೆ ಭಾರೀ ವೈರಲ್ ಆಗುತ್ತಿದ್ದು, ಇದರ ಬಗ್ಗೆ ಎಚ್ಚರಿಕೆಯಿಂದರಬೇಕೆಂದು ಐರ್ಲೆಂಡ್ ಸೈಬರ್ ಕ್ರೈಂ ತಂಡ ತಿಳಿಸಿದೆ.</dd> <dd>

ಅಷ್ಟೇ ಅಲ್ಲದೆ ಇಂತಹ ಸ್ಪ್ಯಾಮ್ ಲಿಂಕ್​ಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬೇಡಿ ಎಂದು ಹೇಳಿದೆ.

ಒಂದು ವೇಳೆ ಪೋರ್ನ್​ ಸೈಟ್​ನಲ್ಲಿ ಕಾಣಿಸುವ ಅಪರಿಚಿತ ಲಿಂಕ್​ಗಳನ್ನು ಓಪನ್ ಮಾಡಿದ್ರೆ ನಿಮ್ಮ ಮೊಬೈಲ್​ಗೆ ವೈರಸ್ ಅಥವಾ ಸ್ಪೈವೇರ್ ದಾಳಿಗೆ ತುತ್ತಾಗಲಿದೆ.</dd> <dd>

ಈ ಮೂಲಕ ನಿಮ್ಮ ಕ್ಯಾಮೆರಾ ಹ್ಯಾಕ್ ಮಾಡಿ, ನಿಮ್ಮೆಲ್ಲಾ ಮಾಹಿತಿಗಳನ್ನು ಕಲೆಹಾಕಿ ಬಲಿಪಶುಗಳನ್ನಾಗಿ ಮಾಡುತ್ತಾರೆ.

ಹೀಗೆ ರೆಕಾರ್ಡ್ ಮಾಡಿಕೊಳ್ಳುವ ವಿಡಿಯೋವನ್ನೂ ಕೂಡ ನಾಳೆ ಪೋರ್ನ್​ ಸೈಟ್​ಗಳಲ್ಲಿ ಇವರು ಹರಿಬಿಡಬಹುದು. ಹೀಗಾಗಿ ಸ್ಮಾರ್ಟ್​ಫೋನ್​ ಬಳಕೆದಾರರು ಎಚ್ಚರಿಕೆಯಿಂದರಬೇಕು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

Comments are closed.