ಉಡುಪಿ: ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರ ಬಿಡುಗಡೆಯಾಗಲು ಹಾಗೂ ಅವರಿಗೆ ಒಳಿತಾಗುವಂತೆ ಕೊಲ್ಲೂರಿನಲ್ಲಿ ಸೋಮವಾರದಂದು ಚಂಡಿಕಾ ಹೋಮ ನಡೆಸಲಾಯಿತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಬೆಳಿಗ್ಗೆ ಚಂಡಿಕಾಹೋಮ ನೆರವೇರಿತು. ಮುಂಜಾನೆಯೇ ಡಿ.ಕೆ.ಶಿಯವರ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಚಂಡಿಕಾಹೋಮವನ್ನು ಕ್ಷೇತ್ರದಲ್ಲಿ ನಡೆಸಲು ಮೊದಲು ಬುಕ್ಕಿಂಗ್ ಮಾಡಿದ್ದರಿಂದ ಈ ಚಂಡಿಕಾ ಹೋಮದ ಹರಕೆಯನ್ನು ಹೆಬ್ಬಾಳ್ಕರ್ ಹೊತ್ತಿದ್ದಾರೆನ್ನಲಾಗಿದೆ.
ಸನ್ನಿಧಿಯಲ್ಲಿ ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾಹೋಮ ನಡೆಸಗಿದ್ದು ಶಿವಕುಮಾರ್ ಅವರ ಸಂಕಷ್ಟಗಳೆಲ್ಲ ಪರಿಹಾರವಾಗಿ ಶೀಘ್ರ ಬಂಧಮುಕ್ತರಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ರಾಜ್ಯ ಕಾಂಗ್ರೆಸ್ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದು ವಿಶೇಷ ಪೂಜೆ ಸಲ್ಲಿಸಿದರು.
Comments are closed.