ಕರ್ನಾಟಕ

ಹುಚ್ಚ ವೆಂಕಟ್ ಹುಚ್ಚಾಟಕ್ಕೆ ಕೆರಳಿದ ಮಡಿಕೇರಿ ಮಂದಿಯಿಂದ ಧರ್ಮದೇಟು! (Video)

Pinterest LinkedIn Tumblr

ಮಡಿಕೇರಿ: ಇತ್ತೀಚೆಗಷ್ಟೇ ಚೆನ್ನೈನ ಬೀದಿಗಳಲ್ಲಿ ಚಪ್ಪಲಿಯಿಲ್ಲದೇ, ಹರಿದ ಬಟ್ಟೆ ತೊಟ್ಟು ಅಲೆಯುತ್ತಿದ್ದ ನಟ ಹಾಗೂ ಯೂಟೂಬ್ ಸ್ಟಾರ್ ನಿನ್ನೆ (ಬುಧವಾರ) ಮಂಡ್ಯದ ಪಾಂಡವಪುರದಲ್ಲಿ ಅಲೆದಾಡುತ್ತಿದ್ದರು. ಆದರೆ ಗುರುವಾರ ಮಡಿಕೇರಿಯಲ್ಲಿ ಕಾಣಿಸಿಕೊಂಡ ಹುಚ್ಚ ವೆಂಕಟ್​ ಕಿರಿಕ್ ಮಾಡಿಕೊಂಡಿದ್ದು ಹುಚ್ಚಾಟ ಮಾಡಿ ಸ್ಥಳೀಯರಿಂದ ಧರ್ಮದೇಟು ತಿಂದಿದ್ದಲ್ಲದೇ ಪೊಲೀಸರ ಅತಿಥಿಯಾಗಿದ್ದಾರೆ.

ಮಡಿಕೇರಿಯ ಕೆಎಸ್​ಆರ್​​ಟಿಸಿ ಡಿಪೋ ಬಳಿ ಸ್ಥಳೀಯರೊಬ್ಬರ ಕಾರು ಪುಡಿಮಾಡಿದ್ದು ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಹುಚ್ಚ ವೆಂಕಟ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ನಾಪೋಕ್ಲುವಿನ ದಿಲೀಪ್​​ ಎಂಬುವವರ ಕಾರಿನ ಮೇಲೆ ಕಾಲಿಟ್ಟು, ದರ್ಪ ತೋರಿದ್ದಲ್ಲದೇ ಕಲ್ಲಿನಿಂದ ಕಾರಿನ ಗಾಜು ಹೊಡೆದು ಪುಡಿಮಾಡಿದ್ಧಾರೆ ಎಂದು ತಿಳಿದು ಬಂದಿದೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹುಚ್ಚ ವೆಂಕಟ್​​ ಅವರನ್ನು ವಶಕ್ಕೆ ಪಡೆದಿದ್ದಾರೆ.

Comments are closed.