ಪ್ರಮುಖ ವರದಿಗಳು

ದಟ್ಟಾರಣ್ಯದಲ್ಲಿ ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ಜೊತೆ ಸುತ್ತಾಡಿದ ಪ್ರಧಾನಿ ಮೋದಿ ! ವೀಡಿಯೊ ವೈರಲ್…

Pinterest LinkedIn Tumblr

ವೈಲ್ಡ್ ಲೈಫ್ ಸರ್ವೈವರ್ ಬೇರ್ ಗ್ರಿಲ್ಸ್ ದಟ್ಟಾರಣ್ಯದಲ್ಲಿ ಬದುಕಿಗೆ ಸವಾಲೊಡ್ಡಿ ಬರುವ ಸಾಹಸ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಂತಹ ಬೇರ್ ಗ್ರಿಲ್ಸ್ ಜೊತೆ ಕಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿರುವುದು ಸದ್ಯ ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಡಿಸ್ಕವರಿ ಚಾನೆಲ್ ನಲ್ಲಿ ಬೇರ್ ಗ್ರಿಲ್ಸ್ ಸಾಹಸದ ವಿಡಿಯೋಗಳು ಬಿತ್ತರವಾಗುತ್ತವೆ. ಇನ್ನು ಬೇರ್ ಗ್ರಿಲ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಡಿನಲ್ಲಿ ಸುತ್ತುತ್ತಿರುವ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಆಗಸ್ಟ್ 12ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಕಾರ್ಯಕ್ರಮ ಬಿತ್ತರವಾಗಲಿದ್ದು ಅಂದು ಜಗತ್ತಿನ 180 ರಾಷ್ಟ್ರಗಳಿಗೆ ಮೋದಿ ಅವರ ಇನ್ನೊಂದು ಮುಖ ಗೊತ್ತಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Comments are closed.