ಕರಾವಳಿ

ಕಂಬಳಿ, ಬೆಡ್ ಶೀಟ್ ಮಾರಾಟಗಾರರ ಸೋಗಿನಲ್ಲಿ ಸುತ್ತಾಡುತ್ತಿದೆಯೇ ಇರಾನಿ ಗ್ಯಾಂಗ್!?

Pinterest LinkedIn Tumblr

ಕುಂದಾಪುರ: ಸುಲಿಗೆ, ದರೋಡೆಯಂತಹ ಪ್ರಕರಣಗಳಲ್ಲಿಯೇ ತೊಡಗಿಸಿಸೊಂಡಿರುವ ಖತರ್ನಾಕ್ ಇರಾನಿ ಗ್ಯಾಂಗ್‌ನ ಸದಸ್ಯರು ವಿವಿದೆಡೆ ಗ್ರಾಮಗಳ ಸುತ್ತ ಮಾರುವೇಷದಲ್ಲಿ ಕಾರ್ಯಾಚರಿಸುತ್ತಿದ್ದು ಜನರು ಈ ಬಗ್ಗೆ ಎಚ್ಚರದಿಂದ ಇರಬೇಕೆಂದು ಪೊಲೀಸ್ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

ಜಿಲ್ಲೆಯ ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಇತರೆ ಹೊದಿಕೆ ಬೆಡ್ ಶೀಟ್, ಗೃಹೋಪಯೋಗಿ ಸಂಬಂಧಿತ ವಸ್ತುಗಳು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಬಳಿಕ ವಸ್ತುಗಳನ್ನು ಕೊಂಡುಕೊಳ್ಳುವುದು ಸೂಕ್ತ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುವೇಶದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮನೆಕಳ್ಳತನ, ದರೋಡೆ, ಸುಲಿಗೆ ಇತ್ಯಾದಿ ಕಳ್ಳತನಗಳನ್ನು ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಮಾಡುತ್ತಿದ್ದು ಅಂತಹ ಗ್ಯಾಂಗ್‌ನ ಸದಸ್ಯರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ಕೂಡ ನಿರ್ದೇಶಿಸಿದೆ.

ಆದ್ದರಿಂದ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನು ನಿಮ್ಮ ನಿಮ್ಮ ಬೀಟ್ ಸಿಬ್ಬಂದಿಗಳಿಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ನೀಡಬೇಕೆಂದು ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.