ಕರಾವಳಿ

ಬರಿದಾಗುತ್ತಿದೆ ಚಕ್ರಾ ನದಿಯ ಒಡಲು: ಸಾಯುತ್ತಿದೆ ಮತ್ಯ್ಸ ಸಂಕುಲಗಳು! (Video)

Pinterest LinkedIn Tumblr

ಕುಂದಾಪುರ: ಎಲ್ಲಿ ನೋಡಿದ್ರೂ ನೀರಿಲ್ಲ….ಬತ್ತಿ ಬರಡು ಭೂಮಿಯಾದಂತ ನದಿ…ಒದ್ದಾಡಿ ಸಾಯುತ್ತಿರುವ ಮೀನು…ಎಲ್ಲೇಡೆ ಮೀನುಗಳ ಮಾರಣಹೋಮದ ವಾಸನೆ.. ಬಸವಳಿದಿದೆ ನದಿ ಪ್ರಾತ್ರದ ಸೂಕ್ವ್ಮ ಜೀವಿಗಳು .. ಸ್ವಾಭಾವಿಕ ಹರಿಯುವ ನದಿ ಪಥ ಬಲಿಸಿದರೆ, ಅಣೆಕಟ್ಟು ಕಟ್ಟಿ ನೀರು ತಡೆ ಹಿಡಿದರೆ ಏನೆಲ್ಲಾ ಅನಾಹುತ ಸೃಷ್ಟಿಯಾಗುತ್ತದೆ ಎನ್ನೋದಕ್ಕೆ ಚಕ್ರಾನದಿ ಪ್ರತ್ಯಕ್ಷ ಸಾಕ್ಷಿ! ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಗಂಗೊಳ್ಳಿ ಬಳಿ ಸಮುದ್ರ ಸೇರುವ ಹಳ್ಳಿಹೊಳೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಚಕ್ರಾನದಿ ನೀರು ಯಂತ್ರಗಳ ಮೂಲಕ ಅತಿಯಾದ ಬಳಕೆ, ಸಾವೆಹಕ್ಲು ಆಣೆಕಟ್ಟು ನೀರಿನ ಹರಿವು ನಿಲ್ಲಿಸಲು ಕಾರಣ. ಸರ್ಕಾರ ರೈತರಿಗೆ ನೀಡಿದ ನೀರೆತ್ತುವ ಯಂತ್ರಗಳಿಗೆ ಉಚಿತ ವಿದ್ಯುತ್ ಎಷ್ಟು ದುರ್ಬಳಕೆ ಮೂಲಕ ಅತೀ ಹೆಚ್ಚು ಅಶ್ವಶಕ್ತಿಯ ನೀರೆತ್ತುವ ಯಂತ್ರಗಳು ಚಕ್ರಾನದಿ ಚಲನೆ ನಿಲ್ಲಿಸುವಂತೆ ಮಾಡಿದೆ. ಅತೀ ಹೆಚ್ಚು ಅಶ್ವಶಕ್ತಿ ಹಾಗೂ ಸಬ್‌ಮೆರಿನ್ ಯಂತ್ರಗಳ ಮೂಲಕ ನೀರೆತ್ತಲಾಗುತ್ತಿದೆ. ಯಂತ್ರ ಸೋಸಿ ಬಸಿದು ತೆಗೆಯುವದರಿಂದ ನದಿ ಬತ್ತುವುದೊಂದೇ ಅಲ್ಲ. ಮೀನುಗಳು ಸಾಯುತ್ತಿದ್ದು, ನದಿ ಪಾತ್ರ ಬೆಂಗಾಡಾಗಿ ಸೂಕ್ಷ್ಮಜೀವಿಗಳು ಸಾಯುತ್ತಿವೆ. ನದಿ ಪಾತ್ರದಲ್ಲಿ ಸಂಚಾರ ಮಾಡುವುದಕ್ಕೂ ಸತ್ತ ಮೀನುಗಳ ಗಬ್ಬುನಾಥ ಮೂಗಿಗೆ ಬಡಿದರೆ, ಬೆಲೆಕಟ್ಟಲಾಗದ ಜೀವ ಸಂಕುಲ ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಪಾಪಪ್ರಜ್ಞೆ ಬಗ್ಗೆ ಯಾರೂ ತುಟಿಬಿಚ್ಚುತ್ತಿಲ್ಲ.

ಒಟ್ಟಾರೆ ಒಂದು ಕಾಲದಲ್ಲಿ ಕುಡಿಯುವ ನೀರು, ಕೃಷಿಗೆ, ಜೀವಜಲವಾಗಿದ್ದ ಚಕ್ರಾನದಿ ಬತ್ತುತ್ತಿರುವುದು ಚಿಂತೆಗೆ ಈಡುಮಾಡುತ್ತಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಾವೆಹಕ್ಲು ಬಳಿ ಚಕ್ರಾನದಿಗೆ ಆಣೆಕಟ್ಟು ಕಟ್ಟಿ, ಲಿಂಗನಮಕ್ಕಿ ಆಣೆಕಟ್ಟಿಗೆ ನೀರು ಹರಸಲು ಮುಂದಾಗಿದ್ದೇ ಚಕ್ರಾ ನದಿ ಬತ್ತಲು ಕಾರಣ! ಹಿಂದೆ ಹೊಳೆಯಲ್ಲಿ ನೀರು ಸರಾಗ ಹರಿಯುತ್ತಿದ್ದು, ಮಳೆಗಾದಲ್ಲಿ ನೀರಿನ ಅಬ್ಬರವಿದ್ದರೆ, ಬೇಸಿಗೆಯಲ್ಲಿ ಹರಿವು ಕ್ಷೀಣಿಸಿದರೂ ಹರಿವಿಕೆ ನಿಂತಿರಲಿಲ್ಲ. ಸೌಪರ್ಣಿಕಾ, ಚಕ್ರಾ, ವಾರಾಹಿ ನದಿಗಳಿಗೆ ಆಣೆಕಟ್ಟು ಕಟ್ಟಿದ ನಂತರ ನದಿಗಳ ಹರಿವು ಕ್ಷೀಣಿಸಿದೆ.

ನದಿಗಳಿಗೆ ಅಲ್ಲಲ್ಲಿ ಕಿಂಡಿ ಆಣೆಕಟ್ಟು ಕಟ್ಟಿದ್ದರಿಂದ ಸಮುದ್ರ ಸೇರಬೇಕಿದ್ದ ನದಿ ಓಡುವುದನ್ನೇ ನಿಲ್ಲಿಸಿದೆ. ಸಾವೆಹಕ್ಲು ಆಣೆಕಟ್ಟು ಬುಡದಲ್ಲಿ ಸ್ವಯಂಚಾಲಿತ ಗೇಟ್ ಅಳವಡಿಸಿ, ನೀರು ಹರಿಯ ಬಿಟ್ಟರೆ ಚಕ್ರಾನದಿ ಚಲನೆ ನಿಲ್ಲಿಸೋದಿಲ್ಲ. ಹೊಳೆಯಲ್ಲಿ ನೀರು ಹರಿಯುವುದರಿಂದ ಪರಿಸರದ ಬಾವಿಗಳಲ್ಲಿ ನೀರಿನ ಮಟ್ಟ ಏರಿ ನೀರಿನ ಸಮಸ್ಯೆ ಆಗೋದಿಲ್ಲ ಎನ್ನೋದು ಸ್ಥಳೀಯರ ಅಭಿಪ್ರಾಯ. ಚಕ್ರಾನದಿ ನೀರು ಹರಿವು ನಿಲ್ಲಿಸಿದ ನಂತರ ನೀರು ಬಳಕೆದಾರರ ವೇದಿಕೆ ಕೂಡಾ ಹುಟ್ಟಿಕೊಂಡಿದ್ದು, ಸಾವೆಹಕ್ಲು ಆಣೆಕಟ್ಟಿಗೆ ಸ್ವಯಂಚಾಲಿತ ಗೇಟ್ ಆಳವಡಿಸಿ, ಬೇಸಿಗೆಯಲ್ಲಿ ನೀರು ಹರಿಸುವಂತೆ ಹೋರಾಟ ಸಮಿತಿ ಮಾಡಿಕೊಂಡ ಮನವಿಗೆ ಸರ್ಕಾರ ಕಿವಿಯಾಗಲೇ ಇಲ್ಲ. ಜನಪ್ರತಿನಿಧಿಗಳು ಕೂಡಾ ಚಕ್ರಾನದಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅವಲತ್ತು ಕೊಳ್ಳುತ್ತಿದ್ದಾರೆ.

ಚಕ್ರಾನದಿಗೆ ಅಲ್ಲಲ್ಲಿ ಸ್ವಾಭಾವಿಕ ಕಟ್ಟಕಟ್ಟಿ ನೀರು ಮೊಗೆದು ಕೃಷಿ ಮಾಡುತ್ತಿದ್ದರು. ಆದರೆ ಈಗ ರಸ್ತೆ ಬಿಟ್ಟು ಬೆಟ್ಟಗುಡ್ಡ ಹಾಡಿಯಲ್ಲೂ ಅಡಕೆ ಕೃಷಿಯಿದ್ದು, ನೀರಿನ ಬಳಕೆ ಕೂಡಾ ಹೆಚ್ಚಿ ನದಿ ಹರಿಯುವದ ನಿಲ್ಲಿಸುತ್ತಿದೆ. ಚಕ್ರಾನದಿ ಮೇಲಿಂದ ಕೆಳಗಿನ ವರಗೆ ೬೦ ರಿಂದ ೭೦ ನೀರೆತ್ತುವ ಮೋಟಾರ್ ಅಳವಡಿಸಿ, ನಿರಂತರ ಹೊಳೆಯಿಂದ ನೀರೆತ್ತುವುದೇ ನದಿ ಬತ್ತಲು ಮತ್ತೊಂದು ಕಾರಣ. ಸರ್ಕಾರ ರೈತರ ಕೃಷಿಗೆ ಮೋಟಾರ್ ಉಚಿತ ವಿದ್ಯುತ್ ಸಂಪರ್ಕ ನೀಡುತ್ತಿದ್ದು, ಸರ್ಕಾರ ಉಚಿತ ಯೋಜನೆ ಎಷ್ಟು ದುರ್ಬಕೆ ಆಗುತ್ತಿದೆ ಎನ್ನೋದ ತಿಳಿಯ ಬೇಕಿದ್ದರೆ ಚಕ್ರಾ ನದಿ ಪಾತ್ರದಲ್ಲಿ ಸುತ್ತುಹಾಕಿ ಬರಬೇಕು. ಒಬ್ಬಬ್ಬರು ಮೂರ್‍ನಾಲ್ಕು ಅತೀ ಹೆಚ್ಚು ಆಶ್ವಶಕ್ತಿಯ ಮೋಟಾರ್ ಮೂಲಕ ಕೃಷಿಗೆ ನೀರುಣಿಸಿಕೊಳ್ಳುತ್ತಿದ್ದಾರೆ. ಸಬ್‌ಮೆರ್ಶಿನ್ ನೀರೆತ್ತುವ ಮೋಟಾರ್ ಕೂಡಾ ಹೊಳೆಯಲ್ಲಿ ಇದೆ.

ವಾರಾಹಿ ಯೋಜನೆ ಮೂಲಕ ಚಕ್ರಾ ನದಿಗೆ ನೀರು ಹರಿಸುವ ಬಗ್ಗೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ಜಲಾನಯ ಇಲಾಖೆಗೆ ಪ್ರಸ್ತಾಪ ಕಳುಹಿಸಲಾಗಿದೆ. ವಾರಾಹಿ ಮೂಲಕ ಚಕ್ರಾನದಿಗೆ ನೀರು ಹರಿಸುವ ಯೋಜನೆ ಕಾರ್‍ಯರೂಪಕ್ಕೆ ಬಂದರೆ ಸಮಸ್ಯೆ ಪರಿಹಾರವಾಗಲಿದ್ದು ಸಂಬಂದಪಟ್ಟವರು ಈ ಬಗ್ಗೆ ಗಮನಹರಿಸುತ್ತಾರಾ ಕಾದುನೋಡಬೇಕಿದೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.