ಗಲ್ಫ್

ಮೊದಲ ಬಾರಿ ಯುಎಇಗೆ ಭೇಟಿ ನೀಡಿದ ಮಹಾಂತ ಸ್ವಾಮಿ ಮಹಾರಾಜ್‌ರಿಗೆ ರಾಜಾತಿಥ್ಯ ನೀಡಿ ಸತ್ಕರಿಸಿದ ಸಚಿವ ನಹ್ಯಾನ್ ! ಈ ವೀಡಿಯೊ ನೋಡಿ…

Pinterest LinkedIn Tumblr

ಯುಎಇ ರಾಜಧಾನಿ ಅಬುಧಾಬಿಯ ಮೊತ್ತ ಮೊದಲ ಹಿಂದು ದೇವಸ್ಥಾನಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಲು ಬಂದ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್‌) ಇದರ ಆಧ್ಯಾತ್ಮಿಕ ಗುರುಗಳಾದ ಮಹಾಂತ ಸ್ವಾಮಿ ಮಹಾರಾಜ್‌ ಅವರನ್ನು ಯುಎಇ ಸಹಿಷ್ಣುತೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಹಾಂತ ಸ್ವಾಮಿ ಮಹಾರಾಜ್‌ ಹಾಗು ಅವರೊಂದಿಗೆ ಬಂದ 50 ಮಂದಿ ಸಾಧುಗಳನ್ನು, ದುಬೈಯ ಹೆಸರಾಂತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರನ್ನು ಅಬುಧಾಬಿಯ ತಮ್ಮ ಸಂಸ್ಥಾನಕ್ಕೆ ಕರೆದುಕೊಂಡು ಹೋದ ನಹ್ಯಾನ್ , ರಾಜ ಆಥಿತ್ಯ ನೀಡಿ ಸತ್ಕರಿಸಿದರು. ಸಾಮರಸ್ಯ, ಸೌಹಾರ್ದತೆ, ಸಮುದಾಯಗಳ ಮಧ್ಯೆಗಿನ ಪ್ರೀತಿ-ವಿಶ್ವಾಸ ಮೂಡಿಸುವ ಕುರಿತು ಮಾತುಕತೆ ನಡೆಸಿದರು.

ಬಳಿಕ ಮಹಾಂತ ಸ್ವಾಮಿ ಮಹಾರಾಜ್‌ ಹಾಗು ಅವರೊಂದಿಗಿದ್ದ ಎಲ್ಲ ಸಾಧುಗಳನ್ನು ಅಬುಧಾಬಿಯ ವಿಶ್ವ ಪ್ರಸಿದ್ಧ ಮಸೀದಿ(ಗ್ರ್ಯಾಂಡ್ ಮೊಸ್ಕ್)ಗೆ ಕರೆದುಕೊಂಡು ಹೋಗಿ ಅಲ್ಲಿನ ವಿಶೇಷತೆಗಳನ್ನು ಪರಿಚಯಿಸಿದರು.

ನಾಗರಿಕ ಸಂಸ್ಥೆ ಹಾಗೂ ವಿಶ್ವಾದ್ಯಂತ ಚಾಲ್ತಿಯಲ್ಲಿರುವ ಹಿಂದೂ ಧರ್ಮದ ಬಿಎಪಿಎಸ್‌ ಸ್ವಾಮಿನಾರಾಯಣ್‌ ಸಂಸ್ಥಾ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದೆ. ಡಾ.ಬಿ.ಆರ್.ಶೆಟ್ಟಿ ಈ ದೇವಸ್ಥಾನ ನಿರ್ಮಾಣದ ಸಂಚಾಲಕರಾಗಿದ್ದಾರೆ.

Comments are closed.