ಮನೋರಂಜನೆ

ತೀವ್ರ ಕುತೂಹಲ ಕೆರಳಿಸಿದ ಮೋದಿ ಜೀವನಾಧಾರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೈಲರ್

Pinterest LinkedIn Tumblr

ನವದೆಹಲಿ: ಧಾನಿ ನರೇಂದ್ರ ಮೋದಿ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿನ ಒಂದೊಂದು ಡೈಲಾಗ್ ಮೈ ನವಿರೇಳಿಸುವಂತಿದೆ.

ಮುಂಬೈನ ಮಲ್ಟಿಪ್ಲೆಕ್ಸ್​​ನಲ್ಲಿ ಟ್ರೈಲರ್​ ಲಾಂಚ್​ ಮಾಡಲಾಯ್ತು. ನರೇಂದ್ರ ಮೋದಿ ಅವರ ಬಾಲ್ಯದ ದಿನಗಳಿಂದ ಹಿಡಿದು ದೇಶದ ಪ್ರಧಾನಿಯಾಗುವವರೆಗೆ ಪ್ರಮುಖ ಘಟ್ಟಗಳನ್ನ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಟ್ರೇಲರ್​​ನಲ್ಲಿ ಇದರ ಝಲಕ್ ಕಾಣಬಹುದು. ಟೀ ಮಾರುವ ಹುಡುಗನಾಗಿದ್ದ ನರೇಂದ್ರ ಮುಂದೆ ಆರ್​​ಎಸ್​ಎಸ್​ ಸೇರಿ ರಾಜಕೀಯಕ್ಕೆ ಎಂಟ್ರಿ ಕೊಡೋದು, ಬಳಿಕ ಗುಜರಾತ್​ ಸಿಎಂ ಆಗಿ ಕೊನೆಗೆ 2014ರ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾಗೋವರೆಗೆ ಮೋದಿಯ ಲೈಫ್​ ಜರ್ನಿಯನ್ನ ಕಟ್ಟಿಕೊಡಲಾಗಿದೆ. ಇದು ಒಬ್ಬ ವ್ಯಕ್ತಿಯ ಕಥೆಯಲ್ಲ, ಕೋಟ್ಯಾಂತರ ಜನರ ಕಥೆ ಎಂಬ ಟ್ಯಾಗ್​ಲೈನ್ ಇದೆ.

https://youtu.be/X6sjQG6lp8s

ವಿವೇಕ್​ ಒಬೇರಾಯ್​ ಮೋದಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಮೋದಿಯ ಮ್ಯಾನರಿಸಂ ಹಾಗೂ ಲುಕ್​ ಅನುಕರಿಸಿದ್ದಾರೆ. ಆದ್ರೂ ನಾವು ಟಿವಿಗಳಲ್ಲಿ ನೋಡೋ ಮೋದಿಗೆ ಹೋಲಿಸಿದ್ರೆ ವಿವೇಕ್​​ ಒಬೇರಾಯ್ ಈ ಪಾತ್ರ ನಿರ್ವಹಿಸುವಲ್ಲಿ​​​ ಕೊಂಚ ವೀಕ್ ಎನಿಸುತ್ತಾರೆ ಎಂದು ಚಿತ್ರ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಟ್ರೈಲರ್​ ರೋಮಾಂಚಕಾರಿಯಾಗಿದೆ ಎಂದು ಮೋದಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದಲ್ಲಿ ಝರೀನಾ ವಹಾಬ್​​ ಮೋದಿಯ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಬರ್ಖಾ ಬಿಷ್ಟ್​​ ಸೆನ್​ಗುಪ್ತಾ ಮೋದಿಯ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತ್​ ಶಾ ಪಾತ್ರದಲ್ಲಿ ಮನೋಜ್​​ ಜೋಶಿ ಅಭಿನಯಿಸಿದ್ದು, ಟ್ರೈಲರ್​​ನಲ್ಲಿ ಅವರ ಲುಕ್​ ಕಾಣಬಹುದು. ಮೇರಿ ಕೋಮ್​ ಹಾಗೂ ಸರಬ್ಜಿತ್​​ನಂತಹ ಅದ್ಭುತ​​ ಚಿತ್ರಗಳನ್ನು ಕೊಟ್ಟ ಓಮಂಗ್​​ ಕುಮಾರ್,​ ನರೇಂದ್ರ ಮೋದಿ ಚಿತ್ರವನ್ನ ನಿರ್ದೇಶಿಸಿದ್ದಾರೆ. ಏಪ್ರಿಲ್​ 5ರಂದು ಚಿತ್ರ ತೆರೆಗೆ ಬರಲಿದೆ.

Comments are closed.