ರಾಷ್ಟ್ರೀಯ

ಸಹೋದ್ಯೋಗಿಗಳೊಂದಿಗೆ ಮನಸ್ತಾಪದ ಹಿನ್ನೆಲೆ; ತನ್ನ ಮೂವರು ಸಹೋದ್ಯೋಗಿಗಳನ್ನ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ CRPF​ ಯೋಧ

Pinterest LinkedIn Tumblr

ಶ್ರೀನಗರ: ಸಿಆರ್​​ಪಿಎಫ್​​​ ಯೋಧರೊಬ್ಬರು ತನ್ನ ಮೂವರು ಸಹೋದ್ಯೋಗಿಗಳನ್ನ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ನಿನ್ನೆ ಉಧಾಮ್​ಪುರ್​ ಶಿಬಿರದಲ್ಲಿ ಮೂವರ ಮೇಲೆ ಗುಂಡು ಹಾರಿಸಿದ ಯೋಧ ಅಜಿತ್​​ ಸಿಂಗ್,​​ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹಿರಿಯ ಸಿಆರ್​ಪಿಎಫ್​ ಅಧಿಕಾರಿಗಳು ಕೂಡಲೇ ಶಿಬಿರದ ಬಳಿ ದೌಡಾಯಿಸಿದ್ದಾರೆ. 187ನೇ ಬೆಟಾಲಿಯನ್​​ನ ಸಿಆರ್​ಪಿಎಫ್​ ಕಮಾಂಡೆಂಟ್​​ ಹರಿಂದರ್​ ಕುಮಾರ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೂವರು ಯೋಧರು ಸಾವನ್ನಪ್ಪಿದ್ದಾರೆ. ಅವರ ಮೇಲೆ ಗುಂಡು ಹಾರಿಸಿದ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅಜಿತ್​ ಸಿಂಗ್ ಸಹೋದ್ಯೋಗಿಗಳೊಂದಿಗೆ ಮನಸ್ತಾಪದ ಹಿನ್ನೆಲೆ ತನ್ನ ಸರ್ವೀಸ್​ ರೈಫಲ್​​ನಿಂದ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿರುವ ಮೂವರು ಹೆಡ್​ ಕಾನ್ಸ್​​ಟೇಬಲ್​​ಗಳು ರಾಜಸ್ಥಾನದ ಪೋಕರ್ಮಲ್​​​, ದೆಹಲಿಯ ಯೋಗಿಂದರ್​ ಶರ್ಮಾ ಹಾಗೂ ಹರಿಯಾಣದ ಮೇದ್​ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡಿರುವ ಅಜಿತ್​ ಸಿಂಗ್​ ಕಾನ್ಪುರದವರಾಗಿದ್ದು, ಸದ್ಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.