ಅಂತರಾಷ್ಟ್ರೀಯ

ಇಂಥ ಭೀಕರ ಅಪಘಾತದ ಖಂಡಿತ ನೀವು ಕಂಡಿರಲಿಕ್ಕಿಲ್ಲ ! ಒಮ್ಮೆ ನೋಡಿ

Pinterest LinkedIn Tumblr

ವಾಹನ ಓಡಿಸುವಾಗ ಸ್ವಲ್ಪ ಮೈಮರೆತರೆ ಅಪಘಾತಗಳು ಸಂಭವಿಸುತ್ತದೆ. ಆದರೆ ಕೆಲವೊಂದು ಬಾರಿ ಯಾವುದೋ ವಾಹನ ಚಾಲಕನ ಅಜಾಗರೂಕತೆಯಿಂದ ದೊಡ್ಡ ಅನಾಹುತಗಳೇ ಗತಿಸಿ ಬಿಡುತ್ತದೆ. ಅಂಥಹದ್ದೇ ಅವಘಡ ವಿಯ್ನೆಟ್ನಾಂನಲ್ಲಿ ನಡೆದಿದೆ.

https://youtu.be/CENy0fprDnw

ಲಾಂಗ್​ ಪ್ರಾಂತ್ಯದ ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಒಂದಷ್ಟು ವಾಹನಗಳು ನಿಂತಿದ್ದವು. ಇನ್ನೇನು ಸಿಗ್ನೆಲ್ ದ್ವೀಪ ಹಸಿರು ಬಣ್ಣಕ್ಕೆ ತಿರುಗಲಿದೆ ಎನ್ನುವಷ್ಟರಲ್ಲಿ ಟ್ರಕ್​ವೊಂದು ವೇಗವಾಗಿ ಹಿಂದೆಯಿಂದ ಬಂದಿದೆ. ಅತಿ ವೇಗವಾಗಿ ಬರುತ್ತಿದ್ದ ಟ್ರಕ್​ ಸಿಗ್ನಲ್ ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ್ದು, ಇದರಿಂದ ಸಿಗ್ನೆಲ್​ನಲ್ಲಿ ನಿಂತಿದ್ದ 20 ಕ್ಕೂ ಹೆಚ್ಚಿನ ಬೈಕುಗಳ ಮೇಲೆ ಹರಿದಿದೆ.

ಈ ಘಟನೆಯಿಂದ 6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 22 ಮಂದಿಗೆ ಗಂಭೀರ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಕ್​ ಚಾಲಕನನ್ನು ವಿಯೆಟ್ನಾಂ ಪೊಲೀಸರು ವಶಕ್ಕೆ ಪಡೆದಿದ್ದು, ಈ ಬ್ರೇಕ್ ಫೇಲ್​ ಆಗಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈ ಭೀಕರ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೊ ತುಣುಕು ವಿಶ್ವದಾದ್ಯಂತ ವೈರಲ್ ಆಗಿದೆ.

Comments are closed.