ಕರಾವಳಿ

ಮೀನುಗಾರಿಕಾ ಬೋಟ್ ನಾಪತ್ತೆ : ದೇವಸ್ಥಾನ, ಚರ್ಚ್,ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ದಿನಾಂಕ 13 .12.18ರಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿದ್ದ 7ಜನ ಬೆಸ್ತರು ಈವರೆಗೆ ನಾಪತ್ತೆಯಾಗಿದ್ದು, ಅವರ ಶೀಘ್ರ ವಾಗಿ ಕ್ಷೇಮವಾಗಿ ಕುಟುಂಬಸ್ಥರನ್ನು ಸೇರಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅವರ ನೇತೃತ್ವದಲ್ಲಿ ಸೋಮೇಶ್ವರ ಸೋಮನಾಥ ದೇವಾಲಯ, ತೊಕ್ಕೊಟ್ಟು ಸಂತ ಸಬೆಸ್ಟಿಯನ್ ಚರ್ಚ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಸ್ತಫ ಹರೇಕಳ, ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ದಿನೇಶ್ ಕುಂಪಲ, ಉಳ್ಲಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಮ್ ಮೆಗಾ, ಇಕ್ಬಾಲ್ ಸಾಮಾನಿಗೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ದೇವಕಿ ಉಳ್ಳಾಲ್, ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್, ಕೋಟೆಕಾರ್ ಗ್ರಾಮ ಸಮಿತಿ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಗಾಂಬೀರ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ವಾರಿಜ .ಬಿ.ಸುವರ್ಣ, ಸತ್ಯವತಿ ಜೆ.ಕೋಟ್ಯಾನ್, ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಿಲಾರ್, ನಗರ ಸಭೆ ಸದಸ್ಯ ರವಿಚಂದ್ರ ಗಟ್ಟಿ, ಉಳ್ಲಾಲ ನಗರ ಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಸುರೇಶ್ ಚಂದ್ರ ಸುವರ್ಣ, ರಾಜೇಂದ್ರ ಬಂಡಸಾಲೆ, ರಿಚರ್ಡ್, ರಹಿಮಾನ್ ಅದ್ದಾಮ, ಬಶೀರ್ ಮಾಡೂರು, ಕರೀಮ್ ಅಳೇಕಲ, ವಿನೋದ್ ಕುಂಪಲ, ಲವೀಶ್ ಮುಂಡೋಳಿ, ರೂಪೇಶ್ ಭಟ್ನಗರ, ಮನ್ಸೂರ್ ಮೊದಲಾದವರು ಉಪಸ್ಥಿತರಿದ್ದರು.

Comments are closed.