ಕರಾವಳಿ

ಕುಂದಾಪುರ ಸರಕಾರಿ ಆಸ್ಪತ್ರೆ ಬಗ್ಗೆ ಸತ್ಯ ದೂರು ಇದ್ರೆ ನೀಡಿ, ಕ್ರಮಕೈಗೊಳ್ತೇವೆ: ಲೋಕಾಯುಕ್ತ ವಿಶ್ವನಾಥ ಶೆಟ್ಟಿ (Video)

Pinterest LinkedIn Tumblr

ಕುಂದಾಪುರ: ಸರಕಾರಿ ಆಸ್ಪತ್ರೆಗಳನ್ನು ಬಡವರು, ಜನಸಾಮಾನ್ಯರು ನಂಬಿರುತ್ತಾರೆ. ಅವರ ನಂಬಿಕೆ ಹಾಳು ಮಾಡುವಂತಹ ಕೆಲಸವಾಗಬಾರದು. ಯಾವುದೇ ಕಾರಣಕ್ಕೂ ಸರಕಾರಿ ಆಸ್ಪತ್ರೆಗಳ ಬಗ್ಗೆ ವೈಯಕ್ತಿಕ ಹಿತಾಸಕ್ತಿಯಿಟ್ಟುಕೊಂಡು ಕೆಟ್ಟದ್ದಾಗಿ ಚಿತ್ರಿಸುವುದು ಸರಿಯಲ್ಲ. ಯಾವುದೇ ನಿಜವಾದ ದೂರುಗಳಿದ್ದರೆ ಲಿಖಿತವಾಗಿ ನೀಡಿದಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ. (ಕನ್ನಡಿಗ ವರ್ಲ್ಡ್)

ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನದ ಸುಮಾರಿಗೆ ದಿಡೀರ್ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಜನರು ವಿಶ್ವಾಸವಿಟ್ಟಿರುವ ಸರಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಇನ್ನಷ್ಟು ಸುಧಾರಣೆ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತೇವೆ. ಕುಂದಾಪುರ ಸರಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ವಿಶ್ವಾಸವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಂತದ್ದಾಗಿ ಯಾವುದೇ ಕುಂದುಕೊರತೆಗಳಿದ್ದರೂ ಹೆಸರನ್ನು ನಮೂದಿಸಿ ಅದನ್ನು ಸೂಕ್ಷ್ಮವಾಗಿ ತಿಳಿಸಿದ್ದಲ್ಲಿ ಅದನ್ನು ಸರಿಪಡಿಸಲಾಗುತ್ತದೆ. ಸುಮ್ಮನೆ ಯಾರ ಬಗ್ಗೆ ತಳ್ಳಿ ಅರ್ಜಿ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವರು ಪ್ರಚಾರಕ್ಕಾಗಿ, ಇನ್ನು ಕೆಲವರು ವೈದ್ಯರಿಂದ ಹಣ ಕೀಳಲು ಷಡ್ಯಂತ್ರ ಮಾಡುವುದು ಸರಿಯಲ್ಲ. ಯಾವುದೇ ದೂರುಗಳಿದ್ದರೂ ಬರೆಯಿರಿ, ಸತ್ಯಾಸತ್ಯತೆ ನೋಡಿ ಕ್ರಮಕೈಗೊಳ್ಳುತ್ತೇವೆ. ಸುಳ್ಳು ಬರೆದರೆ ಪತ್ರಿಕೆ ಬಂದ್ ಮಾಡಲು ಗೊತ್ತಿದೆ. ಅಲ್ಲದೇ ಬಹುತೇಕ ವೈದ್ಯರು ಸ್ಥಳೀಯರೇ ಆಗಿದ್ದು ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ನಾಳೆಯೂ ಅವರ ನಿವ್ರತ್ತಿ ಬಳಿಕವೂ ನಿಮ್ಮ ಮುಖ ನೋದಬೇಕಲ್ಲವೇ ಎಂದು ನ್ಯಾಯಮೂರ್ತಿಗಳು ಹಾಸ್ಯವಾಗಿಯೇ ಮಾರ್ಮಿಕವಾಗಿ ಹೇಳಿದರು. (ಕನ್ನಡಿಗ ವರ್ಲ್ಡ್)

ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ. ನಾಭೂಷಣ್ ಉಡುಪ, ಜಿಲ್ಲಾ ವೈದ್ಯಾಧಿಕಾರಿಗಳು ಇದ್ದರು.

Comments are closed.