ರಾಷ್ಟ್ರೀಯ

ರಾಜಸ್ತಾನ ಚುನಾವಣೆ ಮುಗಿಯುತ್ತಿದ್ದಂತೆ ರಸ್ತೆ ಮೇಲೆ ಇವಿಎಂ ಪತ್ತೆ; ಇಬ್ಬರು ಚುನಾವಣಾಧಿಕಾರಿಗಳ ಅಮಾನತು

Pinterest LinkedIn Tumblr

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆ ನಿನ್ನೆಯಷ್ಟೇ ಮುಗಿದಿದ್ದು, ಕಿಸಾನ್ ಗಂಜ್ ವಿಧಾನಸಭಾ ಕ್ಷೇತ್ರದ ರಸ್ತೆ ಸಮೀಪ ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿದ್ದು, ಇಬ್ಬರು ಚುನಾವಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಬರಾನ್ ಜಿಲ್ಲೆಯ ಕಿಸಾನ್ ಗಂಜ್ ಪ್ರದೇಶದ ಶಹಾಬಾದ್ ಇವಿಎಂ ಪತ್ತೆಯಾಗಿವೆ, ಈ ಹಿನ್ನೆಲೆಯಲ್ಲಿ ಬೇಜವಾಬ್ದಾರಿತನ ತೋರಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರಸ್ತೆಯಲ್ಲಿ ಪತ್ತೆಯಾದ ಬ್ಯಾಲೆಟ್ ಬಾಕ್ಸ್ ಅನ್ನು ಕಿಸಾನ್ ಗಂಜ್ ನ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ರಾಜಸ್ಥಾನದಲ್ಲಿ ಶುಕ್ರವಾರ ವಿಧಾನಸಭಾ ಚುನಾವಣೆಯ ನಿಟ್ಟಿನಲ್ಲಿ ಮತದಾನ ನಡೆದಿತ್ತು. ದಾಖಲೆ ಎಂಬಂತೆ ಶೇ.73.85ರಷ್ಟು ಮತದಾನವಾಗಿತ್ತು.

Comments are closed.