ಕರಾವಳಿ

ನಗರ ನಕ್ಸಲರನ್ನು ಸುಮ್ನೆ ಬಿಟ್ಟು ಪತ್ರಕರ್ತರನ್ನು ಬಂಧಿಸ್ತೀರಾ?: ಸರಕಾರದ ವಿರುದ್ಧ ಕೋಟ ಕಿಡಿ! (Video)

Pinterest LinkedIn Tumblr

ಬೆಂಗಳೂರು: ‘ಮತ್ತೊಮ್ಮೆ ಅಘೋಚರ ತುರ್ತು ಪರಿಸ್ಥಿತಿ ಹೇರಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಬಗ್ಗೆ ಭಾಷಣ ಮಾಡುತ್ತಾ ಠೀಕಿಸಿದ್ದಕ್ಕೆ ಈ ಸರಕಾರ ಪತ್ರಕರ್ತರನ್ನು ಬಂಧಿಸಿದ್ದು ನೋಡಿದರೆ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದ ಆತಂಕ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಅಂದಿನ ತುರ್ತು ಪರಿಸ್ಥಿತಿಯಂತಹ ಕರಾಳ ದಿನಗಳಲ್ಲಿ ದೇವೇಗೌಡರು, ನೀವು (ಕುಮಾರಸ್ವಾಮಿ) ಮತ್ತು ನಾವೆಲ್ಲಾ ಇಂದಿರಾ ಗಾಂಧಿಯವರ ಸರಕಾರ ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹರಣ ಮಾಡಿದೆ ಎಂದು ವಿರೋಧಿಸಿದ್ದು ಈಗ ನಿಮ್ಮ ಮೈತ್ರಿ ಸರಕಾರದಲ್ಲಿ ಮತ್ತೆ ಅದನ್ನು ಪುನರಾವರ್ತನೆ ಮಾಡುತ್ತೀರಾ ಎಂದು ಸಿಎಂ ಕುಮಾರಸ್ವಾಮಿಯನ್ನು ಪ್ರಶ್ನಿಸಿದರು.

ನಗರ ನಕ್ಸಲರು ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ವಿಧಾನಸೌಧದ ಆಸುಪಾಸು ತಿರುಗುವರನ್ನು ಬಂಧಿಸದೇ ಸುಮ್ಮನಿರುವ ನೀವುಗಳು ಟಿಪ್ಪು ಜಯಂತಿಯನ್ನು ವಿರೋಧಿಸಿದ ಕಾರಣಕ್ಕೆ ಸಂತೋಷ್ ತಮ್ಮಯ್ಯನನ್ನು ಬಂಧಿಸಿದ್ದು ಸರಿಯೇ? ನನ್ನ ಸಮೇತ ಬಿಜೆಪಿಯ 104 ಶಾಸಕರು, 18 ವಿಧಾನ ಪರಿಷತ್ ಸದಸ್ಯರು, 17  ಮಂದಿ ಸಂಸದರ ಸಮೇತ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಕೂಡ ಟಿಪ್ಪು ಜಯಂತಿ ವಿರೋಧಿಸಿದ್ದರೂ ಕೂಡ ನಮ್ಮನ್ನ್ಯಾಕೆ ಬಂಧಿಸಿಲ್ಲ? ಅಧಿಕಾರದ ಮೂಲಕ ಪತ್ರಿಕಾ, ವಾಕ್, ವ್ಯಕ್ತಿ ಸ್ವಾತಂತ್ರ್ಯ ಕಸಿಯಲು ಹೊರಟ ನಿಮ್ಮ ಸರಕಾರ ತುರ್ತು ಪರಿಸ್ಥಿತಿಯನ್ನು ಮರಳಿ ತರುತ್ತಿದೆ. ಕೂಡಲೇ ಸಂತೋಷ್ ತಮ್ಮಯ್ಯ ಮೇಲಿನ ಪ್ರಕರಣ ವಾಪಾಸ್ ತೆಗೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಸದನದ ಒಳಗೆ ಮತ್ತೆ ಹೊರಗೆ ಆ ಪತ್ರಕರ್ತನ ಪರ ಹೋರಾಟ ಮುಂದುವರೆಸಲಿದೆ ಎಂದು ಸಿಎಂ ಕುಮಾರಸ್ವಾಮಿಯವರಿಗೆ ತಾಕೀತು ಮಾಡಿದ್ದಾರೆ.

Comments are closed.