ಕರಾವಳಿ

ಟಿಪ್ಪರ್ ಮುಷ್ಕರ ಸ್ಥಳಕ್ಕೆ ಬಂದ ಸಂಸದೆ ಶೋಭಾಗೆ ಘೇರಾವ್ ಹಾಕಿ ಆಕ್ರೋಷ! (Video)

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲಾದ್ಯಂತ ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಟಿಪ್ಪರ್ ಮಾಲಿಕರು ಹಾಗೂ ಚಾಲಕರು ನಿನ್ನೆಯಿಂದ ರಾಷ್ಟ್ರೀಯ ಹೆದ್ದಾರಿ ಸಮೀಪ ಅಲ್ಲಲ್ಲಿ ಟಿಪ್ಪರ್ ಹಾಗೂ ೪೦೭ ವಾಹನ ನಿಲ್ಲಿಸಿ ಮುಷ್ಕರಕ್ಕಿಳಿದಿದ್ದು ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆಯುತ್ತಿದ್ದ ಮುಷ್ಕರಕ್ಕೆ ಆಗಮಿಸಿದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಅಲ್ಲಿದ್ದವರು ಘೇರಾವ್ ಹಾಕಿ ಆಕ್ರೋಷ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಸ್ಥಳಕ್ಕಾಗಮಿಸಿದ ವೇಳೆ ಬಿಸಿಲಿನಲ್ಲಿ ನಿಂತ ಟಿಪ್ಪರ್ ಮಾಲಿಕರ ನಿಯೋಗವನ್ನು ಸಂಸದೆ ಶೋಭಾ ನೆರಳಿಗೆ ಬರುವಂತೆ ತಿಳಿಸಿದ್ದು ಇದರಿಂದ ಕೋಪಗೊಂಡ ಅವರು ‘ನಾವ್ಯಾಕೆ ನೆರಳಿಗೆ ಬರಬೇಕು, ನೀವೆ ಬನ್ನಿರಿ. ವರ್ಷಗಳಿಂದ ನಾವು ಅನುಭವಿಸುತ್ತಿರುವ ಸಮಸ್ಯೆ ನಮಗೆ ಗೊತ್ತು. ಶಾಸಕರು, ಸಂಸದರು, ಎಂ.ಎಲ್.ಸಿ ಎಲ್ಲರೂ ನಮ್ಮವರೇ ಆದರೂ ಕೂಡ ಓರ್ವ ಜಿಲ್ಲಾಧಿಕಾರಿಯನ್ನು ನಿಮಗೆ ಕಂಟ್ರೋಲ್ ಮಾಡಲಾಗುತ್ತಿಲ್ಲವೇ? ನಮಗೆ ಮಾಡಿದ ಸಾಲ ಕಟ್ಟಲು ಆಗುತ್ತಿಲ್ಲ. ಚುನಾವಣೆ ಮೊದಲು ಆಶ್ವಾಸನೆಗಳನ್ನು ಕೊಡುತ್ತೀರಿ ಈಗ ಯರಿಗೆ ಯಾರೂ ಇಲ್ಲ ಅಲ್ಲವೇ? ಎಂದು ಪ್ರಶ್ನಿಸಿದರು.

ಈ ವೇಳೆ ಅವರದ್ದೇ ಪಕ್ಷದ ಕಾರ್ಯಕರ್ತರು ಕೂಡ ಆ ನಿಯೋಗದಲ್ಲಿದ್ದರು. ಆಕ್ರೋಷಗೊಂಡವರನ್ನು ಸಮಾಧಾನಿಸಲು ಬಿಜೆಪಿ ಕ್ಷೇತ್ರಾಧ್ಯಕ್ಷರು ಯತ್ನಿಸಿದರೂ ಕೂಡಯಾರೂ ಕ್ಯಾರೇ ಅನ್ನಲಿಲ್ಲ. ದಿಡೀರ್ ಈ ಬೆಳವಣಿಗೆಯಿಂದ ಕ್ಷಣ ಕಾಲ ಸಂಸದೆ ಶೋಭಾ ಮೌನಕ್ಕೆ ಶರಣಾಗಿ ಪ್ರತಿಭಟನಾಕಾರರ ಮಾತನ್ನು ಆಲಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.