ರಾಷ್ಟ್ರೀಯ

ದೆಹಲಿಯ ಬ್ಯಾಂಕ್​ವೊಂದಕ್ಕೆ ನುಗ್ಗಿ ಕ್ಯಾಶಿಯರ್​ನನ್ನು ಕೊಲೆ ಮಾಡಿ 3 ಲಕ್ಷ ರೂ. ನಗದು ದರೋಡೆ ! ವಿಡಿಯೋ ವೈರಲ್​!

Pinterest LinkedIn Tumblr

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಬ್ಯಾಂಕ್​ವೊಂದಕ್ಕೆ ನುಗ್ಗಿದ ದರೋಡೆಕೋರರು ಕ್ಯಾಶಿಯರ್​ನನ್ನು ಕೊಲೆ ಮಾಡಿ 3 ಲಕ್ಷ ರೂ. ನಗದು ದೋಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ದಕ್ಷಿಣ ದೆಹಲಿಯ ಚಾವ್ಲಾ ಟೌನ್​ನ ಕಾರ್ಪೊರೇಶನ್​ ಬ್ಯಾಂಕ್​ನಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ದೆಹಲಿಯಲ್ಲಿ ನಡೆದ ಮೊದಲ ಬ್ಯಾಂಕ್​ ದರೋಡೆ ಪ್ರಕರಣ ಇದಾಗಿದೆ.

ಆರು ಮುಸುಕುಧಾರಿಗಳು ಬ್ಯಾಂಕ್​ಗೆ ನುಗ್ಗಿ 16 ಜನರಿಗೆ ಗನ್​ ಪಾಯಿಂಟ್​ ತೋರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಕ್ಯಾಶಿಯರ್​ ಸಂತೋಷ್​​ ಕುಮಾರ್​ ಬಳಿ ಹಣ ದೋಚಲು ಯತ್ನಿಸಿದ್ದಾರೆ. ಸಂತೋಷ್​ ದುಡ್ಡು ಕೊಡಲು ನಿರಾಕರಿಸಿದಾಗ ಅವರ ಮೇಲೆ ಗುಂಡು ಹಾರಿಸಿ ಮೂರು ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಇದಕ್ಕೂ ಮುಂಚೆ ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತೋಷ್​ ಕುಮಾರ್​ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Comments are closed.