ಮನೋರಂಜನೆ

ಬಿಗ್‍ಬಾಸ್‍ ಮನೆ ಸೇರಿದ ಎರಡೇ ದಿನಕ್ಕೆ ಗಲಾಟೆ ಮಾಡಿಕೊಂಡು ಕ್ರಿಕೆಟಿಗ ಶ್ರೀಶಾಂತ್ ಹೊರನಡೆದ್ರಾ…?

Pinterest LinkedIn Tumblr

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಆರಂಭವಾಗಿದ್ದು ಈ ಬಾರಿ ಗಣ್ಯರ ದಂಡೆ ಮನೆಯಲ್ಲಿ ಬೀಡು ಬಿಟ್ಟಿದೆ.

https://twitter.com/Boss_updates/status/1041950064581652480

ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಕ್ರಿಕೆಟ್ ನಿಂದ ನಿಷೇಧಗೊಂಡಿರುವ ಶ್ರೀಶಾಂತ್ ಸಹ ಭಾಗವಹಿಸಿದ್ದು ಬಾಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಎರಡೇ ದಿನಕ್ಕೆ ತಾವು ಶೋನಿಂದ ಹೊರ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಬಿಗ್ ಬಾಸ್ ಟಾಸ್ಕ್ ವೊಂದನ್ನು ನೀಡಿತ್ತು. ಈ ಟಾಸ್ಕ್ ಅನ್ನು ಮಾಡಲು ಶ್ರೀಶಾಂತ್ ವಿಫಲರಾಗಿದ್ದರು. ಇದರಿಂದ ಸಹ ಸ್ಪರ್ಧಿಗಳು ಶ್ರೀಶಾಂತ್ ರನ್ನು ನಿಂದಿಸಿದ್ದರು. ಇನ್ನು ಸೋಮಿ ಖಾನ್ ಜೊತೆ ಜಗಳವಾಡಿದ ನಂತರ ಕೋಪಗೊಂಡ ಶ್ರೀಶಾಂತ್ ತಮಗೆ ನೀಡಿದ ಮೈಕ್ ಅನ್ನು ತೆಗೆದು ಹೊರಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇನ್ನು ಶುಕ್ರವಾರ ಎಲಿಮಿನೆಷನ್ ಡೇ ಆಗಿರುವುದರಿಂದ ಸಲ್ಮಾನ್ ಖಾನ್ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ.

ತೀವ್ರ ಕುತೂಹಲ ಮೂಡಿಸಿರುವ ಹಿಂದಿಯ ಬಿಗ್ ಬಾಸ್ 12ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಮುಂದಿನ ದಿನಗಳಲ್ಲಿ ಏನೇನು ಆಗುತ್ತದೆ ಎಂದು ಕಾದುನೋಡಬೇಕಿದೆ.

Comments are closed.