ಮನೋರಂಜನೆ

ಸಾರ್ವಜನಿಕವಾಗಿ ನಿಕ್ ಗೆ ಚುಂಬಿಸುವ ಮೂಲಕ ಸುದ್ದಿಯಾದ ಪ್ರಿಯಾಂಕಾ ಚೋಪ್ರಾ

Pinterest LinkedIn Tumblr

ಅಮೆರಿಕ ಗಾಯಕ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ನಿಕ್ ಗೆ ಚುಂಬಿಸುವ ಮೂಲಕ ಸುದ್ದಿಯಾಗಿದ್ದಾರೆ.

ಮುಂಬೈ, ಮೆಕ್ಸಿಕೋ ಹಾಗೂ ಸಿಂಗಾಪುರದ ಪ್ರವಾಸದ ಬಳಿಕ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಬೀಡುಬಿಟ್ಟಿದೆ. ಇನ್ನು ಬರ್ತ್ ಡೇ ಬಾಯ್ ನಿಕ್ ಗೆ ಪ್ರಿಯಾಂಕಾ ಚೋಪ್ರಾ ಬಹಿರಂಗವಾಗಿ ಚುಂಬಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿಕ್ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಈ ವೇಳೆ ಪ್ರಿಯಾಂಕಾ ಚೋಪ್ರಾ ಭಾವಿ ಪತಿಗೆ ಮುತ್ತಿನ ಸುರಿಮಳೆ ಸುರಿಸಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Comments are closed.