ರಾಷ್ಟ್ರೀಯ

ನೇರ ಪ್ರಸಾರದಲ್ಲೇ ಪತ್ರಕರ್ತೆಗೆ ಕಿಸ್ ಕೊಡಲು ಬಂದವನಿಗೆ ಏನಾಯಿತು ನೋಡಿ….!

Pinterest LinkedIn Tumblr

ಮಾಸ್ಕೋ: ಕೊಲಂಬಿಯ ಮೂಲದ ಪತ್ರಕರ್ತೆ ಫುಟ್ಬಾಲ್ ಪಂದ್ಯದ ಕುರಿತು ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ಮುತ್ತು ನೀಡಿ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿ ಕುರಿತ ಸುದ್ದಿ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಾರಿ ಪತ್ರಕರ್ತೆಯೇ ದುಷ್ಕರ್ಮಿಯ ಮಾನ ಹರಾಜು ಹಾಕಿದ್ದಾಳೆ.

ಹೌದು.. ಬ್ರೆಜಿಲ್ ಮೂಲದ ಪತ್ರಕರ್ತೆ ಲೈವ್ ನೀಡುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ವ್ಯಕ್ತಿಯೋರ್ವ ಆಕೆಗೆ ಮುತ್ತು ನೀಡಲು ಹೋಗಿ ಅಪಮಾನಕ್ಕೀಡಾಗಿದ್ದಾನೆ. ಯೆಕಟೇನ್ ಬರ್ಗ್ ನಲ್ಲಿ ಜಪಾನ್ ಮತ್ತು ಸೆನೆಗಲ್ ನಡುವೆ ನಡೆಯಬೇಕಿದ್ದ ಫೀಫಾ ವಿಶ್ವಕಪ್ ಟೂರ್ನಿಯ ಪಂದ್ಯದ ಕುರಿತು ಬ್ರೆಜಿಲ್ ಮೂಲಕ ಪತ್ರಕರ್ತೆ ಜೂಲಿಯಾ ಗಿಮಾರಾಸ್ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಗೆ ದುಷ್ಕರ್ಮಿಯೋರ್ವ ಮುತ್ತು ನೀಡಲು ಪ್ರಯತ್ನಿಸಿದ್ದಾನೆ.

ಆತ ಹತ್ತಿರ ಬರುತ್ತಿದ್ದಂತೆಯೇ ಅಪಾಯದ ಕುರಿತು ಅರಿತ ಪತ್ರಕರ್ತೆ ಕೂಡಲೇ ದೂರಸರಿದು, ಆತನ ಕೃತ್ಯಕ್ಕೆ ಲೈವ್ ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ. ಮೊದಲು ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ, ಎಂದಿಗೂ ಯಾರಿಗೂ ಹೀಗೆ ಮಾಡಬಾರದು. ಇದಕ್ಕೆಲ್ಲಾ ನಾನು ಅನುವು ಮಾಡಿಕೊಡುವುದಿಲ್ಲ ಎಂದು ಕಿಡಿಕಾರಿದ್ದಾಳೆ. ಆತ ಕೂಡಲೇ ಕ್ಷಮೆ ಯಾಚಿಸಿರುವ ಆಡಿಯೋ ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಪತ್ರಕರ್ತೆಯ ದಿಟ್ಟತನಕ್ಕೆ ಟ್ವೀಟಿಗರು ಬೆಂಬಲ ಸೂಚಿಸಿದ್ದಾರೆ.

Comments are closed.