ಅಂತರಾಷ್ಟ್ರೀಯ

ನಾಯಿಯನ್ನು ನುಂಗಲು ಯತ್ನಿಸುತ್ತಿರುವ ಹೆಬ್ಬಾವೊಂದನ್ನು ಜನರು ಏನು ಮಾಡಿದ್ರು ನೋಡಿ……!

Pinterest LinkedIn Tumblr

ಇತ್ತೀಚೆಗಷ್ಟೇ ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಅದರಲ್ಲಿ ಮಹಿಳೆಯ ಮೃತದೇಹ ಕಂಡಿತ್ತು. ಈ ವಿಡಿಯೋ ಜನರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ಹೆಬ್ಬಾವೊಂದು ಹಸಿವಿನಿಂದ ನಾಯಿಯನ್ನು ನುಂಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೌದು ಥಾಯ್ಲೆಂಡ್ ನಲ್ಲಿ ಹಸಿದಿದ್ದ ಹೆಬ್ಬಾವೊಂದು ನಾಯಿಯನ್ನು ನುಂಗಲು ಯತ್ನಿಸಿದೆ. ಈ ವೇಳೆ ಇದನ್ನು ಗಮನಿಸಿದ ಕೆಲವರು ಹೆಬ್ಬಾವಿನ ಬಾಯಿಂದ ನಾಯಿಯನ್ನು ರಕ್ಷಿಸಿ ಅದರ ಜೀವ ಉಳಿಸಿದ್ದಾರೆ.

ವಿಡಿಯೋದಲ್ಲಿ ಹೆಬ್ಬಾವೊಂದು ನಾಯಿಯನ್ನು ಸುತ್ತಿಕೊಂಡು ಅದನ್ನು ನುಂಗಲು ಮುಂದಾಗಿದೆ. ಅಷ್ಟರಲ್ಲೇ ಅಲ್ಲಿಗೆ ಬಂದ ಕೆಲ ಯುವಕರು ಸುತ್ತಿಕೊಂಡಿದ್ದ ಹೆಬ್ಬಾವನ್ನು ಬಿಡಿಸಿದ್ದಾರೆ. ಆದರೆ ಹೆಬ್ಬಾವು ನಾಯಿಯನ್ನು ಬಾಯಿಯಿಂದ ಕಚ್ಚಿಕೊಂಡಿದ್ದರಿಂದ ಎಷ್ಟೇ ಪ್ರಯತ್ನಿಸಿದರು. ಹಾವು ನಾಯಿಯನ್ನು ಬಿಡಲಿಲ್ಲ. ನಂತರ ಕೋಲಿನಿಂದ ಹಾವಿನ ಬಾಯನ್ನು ಬಿಡಿಸಿದಾಗ ನಾಯಿ ತನ್ನ ಜೀವ ಉಳಿಯಿತೆಂದು ಅಲ್ಲಿಂದ ಪರಾರಿಯಾಗಿದೆ. ಇದನ್ನು ಯುವಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

Comments are closed.