ಉಡುಪಿ: ಕುಂದಾಪುರ ಹಾಗೂ ಬೈಂದೂರಿನಲ್ಲಿ ನಡೆದ ಬಿಜೆಪಿಯ ಜನ ಸುರಕ್ಷಾ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ.
ದೇಶ, ರಾಜ್ಯ, ಧರ್ಮಕ್ಕೆ ಮಡಿದವರ ಬಗ್ಗೆ ಸಿಎಂ ಏನು ಮಾತನಾಡಲ್ಲ. ಈ ಕೊಲೆಗಳ ಬಗ್ಗೆ ಅವರಿಗ್ಯಾಕೆ ಅಸಡ್ಡೆ? ಕೊಲೆಯಾದವರು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇ ತಪ್ಪೇ? ಒಂದೊಮ್ಮೆ ಸಿಎಂ ಮಗ ಹೀಗೆ ಕೊಲೆಯಾದವರ ಸಾಲಿನಲ್ಲಿದ್ದರೇ ಏನು ಮಾಡುತ್ತಿದ್ದರು? ಫೋಟೋಗೆ ಹಾರ ಹಾಕಿದ್ದರೇ ಸಿಎಂ ಏನು ಮಾಡ್ತಿದ್ದರು? ಎಂದು ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ.
ಕೇವಲ ಚುನಾವಣೆ ರಾಜಕಾರಣವನ್ನು ಸಿದ್ದರಾಮಯ್ಯ ಮಾಡ್ತಾ ಇದ್ದಾರೆ. ನಂದು ತಪ್ಪಾಗಿದೆ,ಜನರ ಸುರಕ್ಷೆ ಮಡೋದ್ರಲ್ಲಿ ವಿಫಲವಾಗಿದ್ದೇನೆ ,ಈ ಯಾತ್ರೆಯನ್ನು ಮಾಡುಬಾರದು ಅಂತಾ ಸಿಎಂ ಹೇಳಬೇಕಿತ್ತು, ಹೀಗೆ ಹೇಳಿದ್ರೆ ಅವರಿಗೆ ಯೋಗ್ಯತೆ ಇರ್ತಾ ಇತ್ತು. ಅದ್ರೆ ಅದನ್ನ ಮಾಡಿಲ್ಲ .ಒಬ್ಬ ಅಯೋಗ್ಯ ಮುಖ್ಯಮಂತ್ರಿ ಅನ್ನೊದ್ರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಪಿಸಿದ್ದಾರೆ.
ಜನರ ರಕ್ಷಣೆ ಮಾಡಬೇಕಾದ ಸಿಎಂ ಅವರ ನಡವಳಿಕೆ ಎನು ಎಂಬುವುದನ್ನ ಜನ ಗಮನಿಸುತ್ತಿದ್ದಾರೆ. ಸಿಎಂ ತನ್ನ ಮೈಮೇಲೆ ಟಿಪ್ಪು ರಕ್ತ ಹರಿತಾ ಇದೆ ಅನ್ನೊ ರೂಪದಲ್ಲಿ ,ಟಿಪ್ಪು ಜಯಂತಿ ಮಾಡ್ತಾರೆ. ಟಿಪ್ಪು ಅಚರಣೆ ಮಾಡಿದ್ರೆ ,ಟಿಪ್ಪು ಭಕ್ತಿ ಅಂತಾ ಅಲ್ಲ. ಟಿಪ್ಪು ಒಬ್ಬ ಕ್ರೂರಿ ಮತಾಂತರಿ ಇವನ್ನನ್ನ ಹಿಂದೂಗಳು ಸಹಿಸಲ್ಲ . ಹಿಂದೂ ಮುಸ್ಲಾಂನರ ಮಧ್ಯೆ ಒಡಕು ತಂದ್ರೆ ಮುಸ್ಲಲ್ಮಾನ ವೋಟುಗಳು ಗಟ್ಟಿ ಅಗುತ್ತೆ ಅನ್ನೋ ಕಾರಣಕ್ಕೆ ಮಾತ್ರ ಟಿಪ್ಪು ಅಚರಣೆ ಮಾಡ್ತಾ ಇದ್ದಾರೆ.
ಆರ್.ಎಸ್.ಎಸ್. ಬ್ಯಾನ್ ಮಾಡಲಾಗಲ್ಲ!
ಕರಾವಳಿಯಲ್ಲಿ ಕೊಲೆಗಳು ಅಗ್ತಾ ಇದ್ರೆ ಅವರ ವಿರುದ್ದ ಕಠಿನ ಕ್ರಮಕೈಗೊಳ್ತೇನೆ ಅನ್ನೋ ಬದಲು ,ಆರ್.ಎಸ್.ಎಸ್ ಮಟ್ಟ ಹಾಕ್ತಿನಿ ಅಂತಾರೆ. ಇಂದಿರಗಾಂಧಿ ಅವರ ಅಪ್ಪನ ಕಾಲದಲ್ಲೂ ಆರ್.ಎಸ್.ಎಸ್ ಬ್ಯಾನ್ ಮಾಡಲು ಅಗಿಲ್ಲ ಇನ್ನು ನಿಮ್ಮ ಕೈಯಲ್ಲಿ ಅಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಅವರೇ ಎಷ್ಟು ಪಾರ್ಟಿ ಬದಲಾಯುಸುತ್ತೀರಿ.ಜೆಡಿಎಸ್ ನಲ್ಲಿ ಇದ್ದಾಗ ವೇದಿಕೆಯಲ್ಲಿ ಸಿ ಎಂ ಇಬ್ರಾಹಿಂ ಕಾಂಗ್ರೆಸ್ ನ ಇಂದಿರಾಗಾಂಧಿಯನ್ನು ಅಂತಾರಾಷ್ಟ್ರೀಯ ವೇಶ್ಯೆ ಅಂತಾ ಹೇಳಿದಾಗ, ಚಪ್ಪಾಳೆ ಹೊಡೆದಿದ್ರಿ. ಇವತ್ತು ನಿಮಗೆ ಕಾಂಗ್ರೆಸ್ ಇಲ್ಲದಿದ್ದರೆ ನೀವು ಡಮ್ಮಿ ಆಗುತ್ತಿದ್ದಿರಿ ಎಂದರು.
ಮುಸಲ್ಮಾನರನ್ನ ಸಂತೃಪ್ತಿ ಪಡಿಸೊ ವ್ಯವಸ್ಥೆ ಮುಂದುವರೆಯುತ್ತಾ ಇದೆ. ಗಲಾಭೆಗಳಲ್ಲಿ ಶಾಮೀಲಾದವರ ಮೆಲೇ ಕೇಸು ವಾಪಾಸು ತೆಗೆಯೊ ಕೆಲಸ ಮಾಡ್ತೀರಿ. ಕೇಳಿದ್ರೆ ಮುಗ್ದ ಮುಸಲ್ಮಾನ ಮೆಲಿನ ಕೇಸ್ ವಾಪಸ್ ಪಡ್ಕೊಳ್ಳತ್ತಾ ಇದ್ದೀವಿ ಅಂತೀರಾ.. ಹಾಗಾದ್ರೆ ಮುಗ್ದರ ಮೇಲೂ ನಿಮ್ಮ ಸರ್ಕಾರ ಕೇಸು ಮಾಡುತ್ತೆ ಅಂತಾ ಒಪ್ಪಿಕೊಂಡಂತೆ ಅಲ್ಲವೇ ಎಂದು ಪ್ರಶ್ನಿಸಿದರು.