ಕರಾವಳಿ

ನಾಳೆ ಉರ್ವಾ ಶ್ರೀ ಮಾರಿಗುಡಿಯಲ್ಲಿ ಪ್ರತಿಷ್ಟಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ :ಚಂಡಿಕಾ ಯಾಗಕ್ಕೆ ಹರಿದು ಬಂದ ಜನಸಾಗಾರ

Pinterest LinkedIn Tumblr

ಮಂಗಳೂರು : ನಗರದ ಬೋಳೂರು ಉರ್ವಾ ಮಾರಿಗುಡಿ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆ ಪ್ರಯುಕ್ತ ಮಾರ್ಚ್ 2ನೇ ಶುಕ್ರವಾರದಿಂದ ಮಾರ್ಚ್ 10ನೇ ಶನಿವಾರದವರೆಗೆ ಹಲವಾರು ಪೂಜಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ದಿನಾಂಕ02/03/2018ನೇ ಶುಕ್ರವಾರದಂದು ಚಂಡಿಕಾಯಾಗ, ಮಹಾ ಅನ್ನ ಸಂತರ್ಪಣೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಮಹಾಪೂಜೆಗೆ ಚಾಲನೆ ದೊರಕಿದ್ದು, ಇದೀಗ ಶ್ರೀ ಕ್ಷೇತ್ರದಲ್ಲಿ ದಿನನಿತ್ಯ ಹಲವಾರು ಪೂಜಾ ವಿಧಿವಿಧಾನ ಕಾರ್ಯಗಳು ಹಾಗೂ ದೇವತಾ ಕಾರ್ಯಕ್ರಮಗಳು ನಡೆಯುತ್ತಿದೆ. ಸಾವಿರಾರು ಭಕ್ತಾದಿಗಳು ಇಲ್ಲಿಗೆ ದಿನನಿತ್ಯ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆಯುತ್ತಿದ್ದಾರೆ.

ತಾರೀಕು 06/03/2018ನೇ ಮಂಗಳವಾರ ಸಂಜೆ ಸನ್ನಿದಿಯಲ್ಲಿ ಪ್ರತಿಷ್ಟಾ ವರ್ಧಂತಿ ಮಹೋತ್ಸವ ಸಹಿತ ವರ್ಷಾವಧಿ ಮಹಾಪೂಜೆ ಜರುಗಲಿದೆ. ಬೆಳಿಗ್ಗೆ 7ಕ್ಕೆ ನಿತ್ಯ ಪೂಜೆ, ಮಧ್ಯಾಹ್ನ 12.30ಕ್ಕೆ ಸರ್ವಾಲಂಕಾರ ಪೂಜೆ, ಮಹಾಪೂಜೆ, ಸಂಜೆ 6.30ಕ್ಕೆ ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡೆಸ್ನಾನ, ಕಂಚಿಲ್ ಸೇವೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ ನಡೆಯಲಿದೆ.

ರಾತ್ರಿ 8ಕ್ಕೆ ಸುಡುಮದ್ದು ಪ್ರದರ್ಶನ, ರಾತ್ರಿ 11 ಗಂಟೆಯಿಂದ 1ಗಂಟೆ ಮಧ್ಯ ರಾತ್ರಿಯವರೆಗೆ ನೈವೇದ್ಯ ಬಲಿ, ಮಹಾರಾಶಿ ಪೂಜೆ, ಮರುದಿನ (ಬುಧವಾರ) ಬೆಳಿಗ್ಗೆ 2.30ರಿಂದ 3.30ರವರೆಗೆ ಮಾರಿ ಉಚ್ಛಿಷ್ಠ, ಬೆಳಿಗ್ಗೆ 4.30ಕ್ಕೆ ಮಹಾಪೂಜೆ,ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡೆಸ್ನಾನ, ಕಂಚಿಲ್ ಸೇವೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಥೋತ್ಸವ, ತುಲಭಾರ, ಪ್ರಸಾದ ವಿತರಣೆ ನಡೆಯಲಿದೆ.

ಮಾರ್ಚ್ 10ರಂದು ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ:  ಮಾರ್ಚ್ 10ರಂದು ಸಂಜೆ 7ಕ್ಕೆ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ ಜರಗಲಿದೆ.

 

ಚಂಡಿಕಾ ಯಾಗಕ್ಕೆ ಹರಿದು ಬಂದ ಜನಸಾಗಾರ:

ಉರ್ವಾ ಮಾರಿಗುಡಿ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆ ಪ್ರಯುಕ್ತ ಶುಕ್ರವಾರದಂದು ನಡೆದ ಚಂಡಿಕಾಯಾಗಕ್ಕೆ ಜನಸಾಗಾರವೇ ಹರಿದು ಬಂದಿದ್ದು, ಯಾಗದ ಬಳಿಕ ಲಕ್ಷಾಂತರ ಭಕ್ತಾದಿಗಳು ಮಹಾ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.

ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್

Comments are closed.