ರಾಷ್ಟ್ರೀಯ

ಹೋಳಿ ವರ್ಷಕ್ಕೊಮ್ಮೆ, ನಮಾಜ್ ಪ್ರತಿದಿನ: ಯೋಗಿ

Pinterest LinkedIn Tumblr


ಲಖನೌ: ಹಿಂದುಗಳು ಆಚರಿಸುವ ಹೋಳಿ ಹಬ್ಬ ವರ್ಷಕ್ಕೊಮ್ಮೆ ಆಚರಿಸುವು ದಾದರೆ, ಮುಸ್ಲಿಂ ಮಾಡುವ ನಮಾಜ್ ಪ್ರತಿದಿನ ಮಾಡಲಾಗುತ್ತದೆ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನಮಾಜ್ ಅವಧಿಯ ಬದಲಾವಣೆಯನ್ನು ಸ್ವಾಗತಿಸಿದ್ದಾರೆ.

ಮಾ.11ರಂದು ನಡೆಯುವ ಫುಲ್ಪುರ್ ವಿಧಾನಸಭಾ ಉಪಚುನಾವಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಯೋಗಿ ಹೇಳಿಕೆ ನೀಡಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯ ರಾದ ಮೌಲಾನಾ ಖಾಲೀದ್ ರಶೀದ್ ಫಿರಂಗಿ ಮಾಹ್ಲಿ ಅವರು, ಹೋಳಿ ಹಬ್ಬದ ಪ್ರಯುಕ್ತ, ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನಾ (ನಮಾಜ್) ಸಮಯದಲ್ಲಿ ಬದಲಾವಣೆ ಮಾಡುವಂತೆ ತಿಳಿಸಿದ್ದಾರೆ.

ಕಳೆದ ವರ್ಷ, ಹೋಳಿ ಹಬ್ಬದ ಸಂದರ್ಭ, ನಮಾಜ್ ತೆರಳುವವರ ಮೇಲೆ ಬಣ್ಣ ಎರಚಿದ್ದು, ಗಲಭೆಗೆ ಕಾರಣವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೌಲಾನಾ ತಿಳಿಸಿದ್ದಾರೆ.

Comments are closed.