ಮನೋರಂಜನೆ

ಶ್ರೀದೇವಿ ಒಬ್ಬರೇ ದುಬೈನಲ್ಲಿ ಉಳಿದದ್ದು ಏಕೆ ಎಂಬುದನ್ನು ಬಹಿರಂಗಪಡಿಸಿದ ಪತಿ ಬೋನಿ ಕಪೂರ್‌

Pinterest LinkedIn Tumblr

ಕುಟುಂಬದ ಜತೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ಶ್ರೀದೇವಿ ನಂತರ ಒಂಟಿಯಾಗಿ ದುಬೈನಲ್ಲಿಯೇ ಉಳಿದುಕೊಂಡಿದ್ದು ಏಕೆ? ಎಂಬ ಪ್ರಶ್ನೆ ಶ್ರೀದೇವಿ ಸಾವಿನ ನಂತರ ಎಲ್ಲರನ್ನು ಕಾಡುತ್ತಲೇ ಇದೆ…

ಆದರೆ ಈಗ ಅವರ ಪತಿ ಬೋನಿ ಕಪೂರ್‌ ಸ್ನೇಹಿತ, ಸಿನಿಮಾ ವಿಶ್ಲೇಷಕ ಹಾಗೂ ವಿಮರ್ಶಕರಾಗಿರುವ ಕೋಮಲ್‌ ನೆಹ್ತಾ ಬೋನಿ ಕಪೂರ್‌ ತಮಗೆ ತಿಳಿಸಿರುವ ವಿಷಯವನ್ನು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಶೂಟಿಂಗ್‌ ಕಾರಣದಿಂದಾಗಿ ಜಾಹ್ನವಿಗೆ ಕುಟುಂಬದ ಜತೆ ದುಬೈಗೆ ಬರಲು ಸಾಧ್ಯವಾಗಿರಲಿಲ್ಲ. ದುಬೈನಲ್ಲಿ ಮಗಳಿಗಾಗಿ ಶಾಪಿಂಗ್‌ ಮಾಡಬೇಕೆಂದು ಬಯಸಿದ ಶ್ರೀದೇವಿ ಮೋಹಿತ್ ಮದುವೆಯ ಬಳಿಕ ದುಬೈನಲ್ಲಿಯೇ ಉಳಿದುಕೊಂಡರು. ಮಗಳಿಗೆ ಏನೆಲ್ಲಾ ಕೊಂಡುಕೊಳ್ಳಬೇಕು ಎಂಬುವುದನ್ನು ಫೋನ್‌ನಲ್ಲಿ ನೋಟ್‌ ಮಾಡಿದ್ದರು. ಆದರೆ ಫೋನ್‌ ಎಲ್ಲೋ ಇಟ್ಟು ಮರೆತು ಹೋಗಿದ್ದರು ಆದ್ದರಿಂದ ಎಲ್ಲಿಯೂ ಹೊರಗಡೆ ಹೋಗದೆ ಹೋಟೆಲ್‌ ರೂಮ್‌ನಲ್ಲಿಯೇ ತಂಗಿದ್ದರು.

ಆಗ ಬೋನಿ ಕಪೂರ್‌ ಶ್ರೀದೇವಿಗೆ ಕರೆ ಮಾಡುತ್ತಾರೆ. ಶ್ರೀದೇವಿ ‘ಪಪಾ (ಬೋನಿಯನ್ನು ಶ್ರೀದೇವಿ ಹೀಗೆ ಕರೆಯುತ್ತಿದ್ದರು) ನಿಮ್ಮನ್ನು ಮಿಸ್‌ ಮಾಡುತ್ತಿದ್ದೇ’ ಎಂದಿದ್ದರು. ಶ್ರೀದೇವಿಗೆ ಸರ್‌ಪ್ರೈಸ್‌ ಕೊಡಬೇಕೆಂದು ದುಬೈಗೆ ಹೋಗಿದ್ದರು.

Comments are closed.