ಕರಾವಳಿ

ಗಲಭೆ ಸೃಷ್ಟಿಸುವ ಸಂಘಟನೆಗಳ ಮೇಲೆ ತೀವ್ರ ನಿಗಾ ಇಡ್ತೇವೆ: ಬೈಂದೂರಿನಲ್ಲಿ ಸಿಎಂ ಸಿದ್ಧರಾಮಯ್ಯ (Video)

Pinterest LinkedIn Tumblr

 

ಕುಂದಾಪುರ: ಕರಾವಳಿಯಲ್ಲಿ ಸದ್ಯಕ್ಕಿರುವ ಪರಿಸ್ಥಿತಿಗೆ ಕೋಮುವಾದಿಗಳು ಕಾರಣ ಎಂದು ಸಿಎಂ ಸಿದ್ದರಾಮಯ್ಯ ಉಡುಪಿಯ ಬೈಂದೂರಿನಲ್ಲಿ ಅರೋಪಿಸಿದ್ದಾರೆ. ಇತ್ತೀಚೆಗೆ ನಡೆದ ಗಲಭೆಗಳಿಗೆ ಸಂಘ ಪರಿವಾರ ನೇರ ಕುಮ್ಮಕ್ಕು ನೀಡುತ್ತಿದ್ದಾರೆ. ಅವರು ಬಿಟ್ಟರೇ ಬೇರ್ಯಾರು ಇಂತಹ ಕೆಲಸ ಮಾಡಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಬೈಂದೂರು ಸಮೀಪದ ಅರೆಶಿರೂರು ಹೆಲಿಪ್ಯಾಡಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ರಾಜ್ಯದಲ್ಲಿ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವ ಚರ್ಚೆ ನಡೆದಿಲ್ಲ. ಆದರೇ ಪಿ.ಎಫ್.ಐ ,ಬಜರಂಗದಳ, ಶ್ರೀರಾಮ ಸೇನೆ ನಿಗಾ ಇಡಲು ಸೂಚನೆ ನೀಡಿದ್ದೇನೆ ಎಂದರು. ಕಾಂಗ್ರೆಸ್ಸಿವರನ್ನು ಹಿಂದೂ ವಿರೋಧಿಗಳು ಎಂದು ಹೇಳಿದವರಾರು? ಆ ರೀತಿ ಎನ್ನುವವರು‌ ಮನುಷ್ಯರೇ ಅಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ರಾಜ್ಯದ ಅಭಿವೃದ್ದಿ‌ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಠೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಗೋಡ್ಸೆಯ ಅನುಯಾಯುಗಳಿಂದ ನಾವು ಅಭಿವೃದ್ದಿಯ ಪಾಠ ಕಲಿಯಬೇಕಾಗಿಲ್ಲ. ಅಭಿವೃದ್ದಿಯಲ್ಲಿ‌ ಉತ್ತರ ಪ್ರದೇಶ ಎಷ್ಟನೆ ಸ್ಥಾನದಲ್ಲಿ‌ಇದೆ ಎಂಬುವುದು ಎಲ್ಲರಿಗೂ ಗೊತ್ತು,ಅಭಿವೃದ್ದಿಯಲ್ಲಿ‌ ನಾವೇ ನಂಬರ್ ವನ್ ಯುಪಿ ಒಂದು‌ ಜಂಗಲ್ ರಾಜ್ ,ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ ತೀರುಗೇಟು ನೀಡಿದರು.

ಇನ್ನೂ ಶ್ರೀ‌ಕೃಷ್ಣ ಮಠಕ್ಕೆ ಭೇಟಿ‌ ನೀಡುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿಎಂ ನಾನು ದೇವಾಸ್ಥಾನಗಳಿಗೆ ಭೇಟಿ‌ ನೀಡ್ತೇನೆ.ಹಾಗಂತ ಎಲ್ಲಾ ದೇವಸ್ಥಾನಗಳಿಗೆ ಹೋಗಲ್ಲ ,ಶ್ರೀ‌ಕೃಷ್ಣ ಮಠಕ್ಕೆ ಹೋಗದಿರುವುದು ದೊಡ್ಡ ವಿಷಯನೇ ಅಲ್ಲ ಎನ್ನುವುದರ ಮೂಲಕ ಮಠದ ಮೇಲಿನ ಮುನಿಸನ್ನು ಬಹಿರಂಗವಾಗಿ ತೋರಿಸಿಕೊಟ್ಟರು.

ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರಿನ ಊಟ!?
ಕಾಂಗ್ರೆಸ್ ಸಾಧನ‌ ಸಮಾವೇಶಕ್ಕೆ ಕೊಲ್ಲೂರು ದೇವಳದಿಂದ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ಸಮಾಜಿಕ ತಾಣದಲ್ಲಿ ಭಾರೀ‌ ಠೀಕೆಗೆ ಕಾರಣವಾಗಿದೆ. ಸುಮಾರು ಹತ್ತು ಸಾವಿರ‌ ಜನ ಸೇರಿರುವ ಸಾಧನ‌ ಸಮಾವೇಶಕ್ಕೆ ದೇವಳದಿಂದ ಊಟದ ವ್ಯವಸ್ಥೆ ಮಾಡಬಹುದಾದರೆ ಕಲ್ಲಡ್ಕ ಶಾಲೆಗೆ ಊಟ ಕೊಡುವುದರಲ್ಲಿ‌ ತಪ್ಪೆನಿದೆ ಎಂದು ಸಮಾಜಿಕ‌ ಜಾಲತಾಣಗಳಲ್ಲಿ‌ ವೈರಲ್ ಆಗಿದೆ. ಈ‌ ಬಗ್ಗೆ ಪ್ರತಿಕ್ರಿಸಿದ ಸಿ ಎಂ ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಎರ್ಪಡಿಸಿರುವ ಊಟದ ಬಗ್ಗೆ ನನಗೆ ಮಾಹಿತಿ ಇಲ್ಲ. ಅದರೆ ಕಲ್ಲಡ್ಕ ಶಾಲೆಗೆ ಊಟ ಯಾಕೆ ಕೊಡಬೇಕು ? ಅದೇನು ಸರಕಾರಿ ಶಾಲೆಯಲ್ಲ,ಕಲ್ಲಡ್ಕ ಶಾಲೆಗೆ ನೀಡೋ ಮಧ್ಯಾಹ್ನದೂಟವನ್ನು ಬೇರೆ ಶಾಲೆಗೆ‌ ನೀಡಬಹುದಲ್ವೇ ಎಂದು‌ ಪ್ರತಿಕ್ರಿಯಿಸಿದರು.

Comments are closed.