ಮನೋರಂಜನೆ

ಅನಂತ್ ನಾಗ್ ನಟನೆಯ ‘ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಸಿನೆಮಾದ ಆಡಿಯೋ ಬಿಡುಗಡೆ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ವರಗೆ ಯಾರೂ ಮಾಡಿರಿದಂಥ ಕಥಾ ಹಂದರವನ್ನಿಟ್ಟುಕೊಂಡು ನರೇಂದ್ರ ಬಾಬು (ಕಬಡ್ಡಿ ) ನಿರ್ದೇಶಿಸಿರುವ ‘ಹೊಟ್ಟೆಗಾಗಿ ಗೇಣುಬಟ್ಟೆಗಾಗಿ’ ಸಿನೆಮಾದ ಆಡಿಯೋ ಬಿಡುಗಡೆ ಶನಿವಾರ ಬೆಂಗಳೂರಿನಲ್ಲಿ ನಡೆಯಿತು.

ಮನಸೂರೆಗೊಳ್ಳುವಂಥ ಸುಮಧುರ ಹಾಡುಗಳಿರುವ ಈ ಸಿನೆಮಾವನ್ನು ಕಲರ್ಸ್ ಆಫ್ ಆನೇಕಲ್ ಹಾಗು ACME ಮೂವೀಸ್ ಇಂಟೆರ್ ನ್ಯಾಷನಲ್ ನಿರ್ಮಿಸಿದೆ.

ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನೆಮಾದಲ್ಲಿ ಪ್ರಮುಖ ಪಾತ್ರವಹಿಸಿರುವ ಕನ್ನಡದ ಹಿರಿಯ ಹೆಸರಾಂತ ನಟ ಅನಂತ್ ನಾಗ್, “ರಂಗಿತರಂಗ’ದ ನಟಿ ರಾಧಿಕಾ ಚೇತನ್, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್, ನಿರ್ದೇಶಕ ನರೇಂದ್ರ ಬಾಬು ಕಲರ್ಸ್‌ ಆಫ್ ಆನೇಕಲ್‌’ನ ಸುದರ್ಶನ್‌, ರಾಮಮೂರ್ತಿ ಮತ್ತು ಈರಣ್ಣ, ದುಬೈಯ ಖ್ಯಾತ ಉದ್ಯಮಿ, ಗಾಯಕ ಹಾಗು ACME ಮೂವೀಸ್ ಇಂಟೆರ್ ನ್ಯಾಷನಲ್’ನ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಸಿನೆಮಾದ ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಉಪಸ್ಥಿತರಿದ್ದರು.

ಬಹುತೇಕ ಎರಡೇ ಪಾತ್ರಗಳ ಸುತ್ತ ಸುತ್ತುವ ಕಥೆಯಿದು. ಪ್ರಮುಖವಾಗಿ ಎರಡು ಜನರೇಷನ್ಗಳ ಕತೆ ಇದೆ. ಹಾಸ್ಯಮಯವಾಗಿ ಶುರುವಾಗುವ ಚಿತ್ರವು, ನಂತರ ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ ಎನ್ನುತ್ತಾರೆ ನಿರ್ದೇಶಕ ನರೇಂದ್ರ ಬಾಬು.

Comments are closed.