ಕರಾವಳಿ

‘ಪೂಜಾರಿ ಪುಂಗಿ ಬಂದ್ ಆಗಬೇಕು’: ಟೀಕೆಗೆ ಗುರಿಯಾದ ಅನಂತ್ ಕುಮಾರ್ ಹೆಗಡೆ ಹೇಳಿಕೆ (video)

Pinterest LinkedIn Tumblr

ಕುಂದಾಪುರ: ನವೆಂಬರ್ 13ರಂದು ಸಂಜೆ ಬೈಂದೂರಿನ ನಾಗೂರಿನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಬಿಲ್ಲವ ಸಮುದಾಯದವರನ್ನು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪೂಜಾರಿ ಪುಂಗಿ ಬಂದ್ ಆಗಬೇಕು!
ಬೈಂದೂರು ನಮ್ಮ ಯುದ್ಧ ಭೂಮಿ, ಬೈಂದೂರಿನಲ್ಲಿ ನಮ್ಮ ಭಗವಾಧ್ವಜ, ನಮ್ಮ ಬಿಜೆಪಿ ಧ್ವಜ ಹಾರಾಡ್ತಾ ಇರಬೇಕು. ಮತ್ತೆ ಇಲ್ಲಿನ ಕಾಂಗ್ರೆಸ್ ಶಾಸಕರ ದುರಾಡಳಿತ ಕಡಿಮೆ ಆಗಬೇಕು. ಪೂಜಾರಿಯ ಪುಂಗಿ ಬಂದ್ ಆಗಬೇಕು, ಬಿಜೆಪಿ ಗೆಲ್ಲಬೇಕು.

‘ಪೂಜಾರಿ ಪುಂಗಿ ಬಂದ್ ಆಗಬೇಕು’ ಎಂಬ ಸಚಿವರ ಈ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಸದ್ಯ ವ್ಯಾಪಕ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಮಾತ್ರವಲ್ಲದೇ ಕೇಂದ್ರ ಸಚಿವ ಹೆಗಡೆ ಕ್ಷಮೆಯಾಚನೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಈ ಬಗ್ಗೆ ‘ಕನ್ನಡಿಗ ವರ್ಲ್ಡ್’ಗೆ ಪ್ರತಿಕ್ರಿಯಿಸಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ರಾಜಕೀಯದಲ್ಲಿ ವೈಯಕ್ತಿಕ ನಿಂದನೆ ಸಹಿಸಬಹುದು ಆದರೇ ಸಮಸ್ತ ಸಮುದಾಯದ ನಿಂದನೆ ಮಾಡುವ ಹೇಳಿಕೆ ನೀಡುವುದು ಸರಿಯಲ್ಲ. ನನ್ನ ಬಗ್ಗೆ ಠೀಕೆ ಮಾಡಲಿ, ಆದರೇ ಜಾತಿ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದಿದ್ದಾರೆ.

ಈ ಬಗ್ಗೆ ಕುಂದಾಪುರ ತಾ.ಪಂ ಸದಸ್ಯ ಕರಣ್ ಪೂಜಾರಿ ಮಾತನಾಡಿ, ಸಂಸದ ಅನಂತ ಕುಮಾರ್ ಹೆಗಡೆ ಅವರು ಸಭೆಯಲ್ಲಿ ಹೇಳಿಕೆ ನೀಡಿದ್ದು ಶಾಸಕರ ವಿರುದ್ಧವೇ ಹೊರತು ಬಿಲ್ಲವ ಸಮುದಾಯದ ವಿರುದ್ಧವಲ್ಲ. ಈ ಬಗ್ಗೆ ಕಾಂಗ್ರೆಸ್ ರಾಜಕೀಯ ಮಾಡಿದ್ದು, ಅವರು ಪ್ರತಿಭಟಿಸಿದರೇ ನಾವು ಸೂಕ್ತ ವೇದಿಕೆಯಲ್ಲಿ ಉತ್ತರ ಕೊಡುತ್ತೇವೆ ಎಂದಿದ್ದಾರೆ.

 

Comments are closed.