ರಾಷ್ಟ್ರೀಯ

ವಾಹನ ನಿರಾಕರಿಸಿದ್ದರಿಂದ ಮಗಳ ಮೃತದೇಹವನ್ನು ಹೆಗಲ ಮೇಲೆ ಹೊತ್ತು 15 ಕಿಮೀಗಳಿಗಿಂತಲೂ ಹೆಚ್ಚು ದೂರ ನಡೆದ ಅಪ್ಪ! ವೀಡಿಯೊ ವೈರಲ್

Pinterest LinkedIn Tumblr

ಒಡಿಶಾ: ಪುಟ್ಟ ಮಗಳ ಮೃತದೇಹವನ್ನು ಹೊತ್ತು ಆ ಅಪ್ಪ ನಡೆದದ್ದು 15 ಕಿಮೀಗಿಂತಲೂ ಹೆಚ್ಚು ದೂರ. ಕಳೆದ ವರ್ಷ ಒಡಿಶಾದಲ್ಲಿ ತನ್ನ ಪತ್ನಿಯ ಮೃತದೇಹವನ್ನು ಹೊತ್ತು 10 ಕಿಮೀಗಿಂತಲೂ ಹೆಚ್ಚು ದೂರ ನಡೆದಿದ್ದ ದಾನಾ ಮಾಂಝಿ ಸುದ್ದಿಯಾಗಿದ್ದರು. ಇದೀಗ ಅದೇ ರಾಜ್ಯದ ಪೆಟಾಮುಡಿ ಗ್ರಾಮದಲ್ಲಿನ ಗಟಿ ಧೀಬಾರ್ ಎಂಬಾತ ತನ್ನ 5 ವರ್ಷದ ಮಗಳ ಮೃತದೇಹವನ್ನು ಹೊತ್ತು ನಡೆದ ಘಟನೆ ವರದಿಯಾಗಿದೆ.

ಗಟಿ ದಿಬಾರ್ ಅವರ ಮಗಳು ಸುಮೀ ಧೀಬಾರ್ ಇಲ್ಲಿನ ಅಂಗೂಲ್ ಎಂಬಲ್ಲಿರುವ ಪಲಾಲಾಹಾಡ ಕಮ್ಯೂನಿಟಿ ಹೆಲ್ತ್ ಸೆಂಟರ್‍‍ನಲ್ಲಿ ಜನವರಿ 4ರಂದು ಮೃತಪಟ್ಟಿದ್ದಳು.

ಮಗಳ ಮೃತದೇಹವನ್ನೊಯ್ಯಲು ಶ್ರದ್ಧಾಂಜಲಿ ವಾಹನ ನಿರಾಕರಿಸಿದ್ದರಿಂದ ಗಟಿ ಧೀಬಾರ್ ಮಗಳ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸರಿಸುಮಾರು 15 ಕಿಮೀಗಳಿಗಿಂತಲೂ ಹೆಚ್ಚು ದೂರ ನಡೆದಿದ್ದಾರೆ.

ತನ್ನ ಹಳ್ಳಿಯಿಂದ ದೂರದಲ್ಲಿರುವ ಹೆಲ್ತ್ ಸೆಂಟರ್‍ ನಿಂದ ಆ್ಯಂಬುಲೆನ್ಸ್ ಗೆ ಕೊಡಲು ಹಣವಿಲ್ಲದಿರುವ ಕಾರಣ ಗಟಿ ಮಗಳ ಶವ ಹೊತ್ತು ನಡೆದಿದ್ದಾರೆ.

ಗಟಿ ತನ್ನ ಮಗಳ ಮೃತದೇಹವನ್ನು ಹೊತ್ತು ನಡೆಯುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ ಅನಿಲ್ ಕುಮಾರ್ ಸಮಾಲ್ ಹೆಲ್ತ್ ಸೆಂಟರ್ ನ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹೇಳಿದ್ದಾರೆ.

ಗಟಿ ಅವರ ಕುಟುಂಬದವರನ್ನು ಭೇಟಿ ಮಾಡಿದ ಉಪ ಜಿಲ್ಲಾಧಿಕಾರಿಯವರು, ಈ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮಾಹಿತಿಯ ಪ್ರಕಾರ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಮತ್ತು ಆಸ್ಪತ್ರೆಯ ಮ್ಯಾನೇಜರ್‍‍ನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸಮಾಲ್ ತಿಳಿಸಿದ್ದಾರೆ.,

Comments are closed.